ಗುರುಗ್ರಾಮ, ಫೆ.06 (DaijiworldNews/HR): 34ನೇ ಸಿಆರ್ಪಿಎಫ್ನ ಮೊದಲ ಮಹಿಳಾ ತಂಡವನ್ನು ವಿಶೇಷ ಜಂಗಲ್ ವಾರ್ಫೇರ್ ಕಮಾಂಡೊ ಪಡೆ 'ಕೋಬ್ರಾ(ಕಮಾಂಡೊ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್)ಗೆ ಸೇರಿಸಲಾಗಿದೆ.
ಸಾಂಧರ್ಭಿಕ ಚಿತ್ರ
ಕಡರ್ಪುರದಲ್ಲಿರುವ ಸಿಆರ್ಪಿಎಫ್ ಶಿಬಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಮಹಿಳೆಯರು ನಡೆಸಿದ ಯುದ್ಧಸಮರ ಕಸರತ್ತನ್ನು ಸಿಆರ್ಪಿಎಫ್ ಮಹಾನಿರ್ದೇಶಕಿ ಎ ಪಿ ಮಹೇಶ್ವರಿ ವೀಕ್ಷಿಸಿದರು.
ಇನ್ನು 2009ರಲ್ಲಿ ಕೇಂದ್ರೀಯ ಮೀಸಲು ಪಡೆ (ಸಿಆರ್ಪಿಎಫ್) ಅಡಿಯಲ್ಲಿ ಗುಪ್ತಚರ ಆಧಾರಿತ ಅರಣ್ಯದಲ್ಲಿ ಯುದ್ಧ ಕಾರ್ಯಾಚರಣೆ ನಡೆಸಲು ಕೋಬ್ರಾ ಪಡೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಇಲ್ಲಿವರೆಗೂ ಈ ಘಟಕದಲ್ಲಿ ಪುರುಷ ಸೈನಿಕರು ಕಾರ್ಯನಿರ್ವಹಿಸುತ್ತಿದ್ದರು. ಇದೇ ಮೊದಲ ಬಾರಿಗೆ ಮಹಿಳಾ ಪಡೆಯನ್ನು ಸೇರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.