ಕೋಲ್ಕತ್ತ,ಫೆ.06 (DaijiworldNews/HR): "ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಗುಡ್ ಬೈ ಹೇಳಲು ಪಶ್ಚಿಮ ಬಂಗಾಳದ ಜನ ತೀರ್ಮಾನಿಸಿದ್ದಾರೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಈ ಕುರಿತು ರೈತರನ್ನು ಉದ್ದೇಶಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪಶ್ಚಿಮ ಬಂಗಾಳದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ರೈತರನ್ನು ಒತ್ತಾಯಿಸಿದ್ದು, ರೈತರ ಜತೆ ಊಟವನ್ನೂ ಮಾಡಿತ್ತಾರೆ. ನೀವು ಮೋದಿಯವರನ್ನು ಆಶೀರ್ವದಿಸಿದರೆ, ಬಂಗಾಳದಲ್ಲಿ ಕಮಲ ಅರಳಿಸಿದರೆ, ನಂತರ ರಾಜ್ಯದಲ್ಲಿ ಅಭಿವೃದ್ಧಿ ಆರಂಭವಾಗಲಿದೆ. ಬಂಗಾಳದಲ್ಲಿ ಕಮಲ ಅರಳಲಿದೆ ಮತ್ತು ರೈತರು ಅಭಿವೃದ್ಧಿ ಕಾಣಲಿದ್ದಾರೆ" ಎಂದರು.
ಇನ್ನು "ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಅವರು ಅಹಂಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೊಳಿಸಿಲ್ಲ, ಇದರಿಂದ ರಾಜ್ಯದ 70 ಲಕ್ಷ ರೈತರು ಸೌಲಭ್ಯ ವಂಚಿತರಾಗಿದ್ದಾರೆ" ಎಂದು ಹೇಳಿದ್ದಾರೆ.