ರಾಯಪುರ, ಫೆ.06 (DaijiworldNews/PY): ದಾಂತೆವಾಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಗುಂಡಿ ಚಕಮಕಿಯಲ್ಲಿ ಭದ್ರತಾ ಪಡೆಗಳು ಹಿರಿಯ ಮಾವೋವಾದಿ ಕಮಾಂಡರ್ ಓರ್ವನನ್ನು ಹತ್ಯೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಮಾವೋವಾದಿ ಕಮಾಂಡರ್ನನ್ನು ಮಾಸಾ ಮುಚಾಕಿ (31) ಎಂದು ಗುರುತಿಸಲಾಗಿದೆ.
ದಾಂತೇವಾಡ ಜಿಲ್ಲಾ ಮೀಸಲು ಗಾರ್ಡ್ಸ್ ಹಾಗೂ ಮಾವೋವಾದಿಗಳ ನಡುವೆ ಅರಣ್ಯ ಭೂಪ್ರದೇಶವಾದ ಸುರ್ನಾರ್ ಹಾಗು ಟೆಟಮ್ನ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಓರ್ವ ಮಾವೋವಾದಿಯನ್ನು ಹತ್ಯೆಗೈಯಲಾಗಿದೆ.
"ಆತನಿಗಾಗಿ ಒಂದು ಲಕ್ಷ ರೂ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು. ಈ ಮಾವೋವಾದಿಯ ವಿರುದ್ದ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿವೆ" ಎಂದು ದಾಂತೇವಾಡದ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.
ದಾಂತೇವಾಡದಲ್ಲಿನ ಕಾತೆಕಲ್ಯಾಣ ಪ್ರದೇಶ ಸಮಿತಿಯ ಕಮಾಂಡರ್ ಆಗಿ ಮುಚಾಕಿ ಕೆಲಸ ಮಾಡುತ್ತಿದ್ದ.
ಭದ್ರತಾಪಡೆಗಳಿಗೆ ಕಾರ್ಯಾಚರಣೆಯ ಸಂದರ್ಭ ಯಾವುದೇ ಗಾಯಗಳಾದ ಬಗ್ಗೆ ಈವರೆಗೆ ವರದಿಯಾಗಿಲ್ಲ.
"ಶೋಧ ಕಾರ್ಯಚರಣೆ ಮತ್ತಷ್ಟು ತೀವ್ರಗೊಳ್ಳಲಿದೆ" ಎಂದು ಎಸ್ಪಿ ಹೇಳಿದ್ದಾರೆ.