ನವದೆಹಲಿ, ಫೆ.06 (DaijiworldNews/PY): "ಅನ್ನದಾತರು ದೇಶದ ಹಿತದೃಷ್ಟಿಯಿಂದ ಶಾಂತಿಯುತವಾದ ಹೋರಾಟ ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನರೇಂದ್ರ ಮೋದಿ ಸರ್ಕಾರವು ದೇಶ ಹಾಗೂ ಮನೆ ಇವೆರಡನ್ನೂ ಹಾಳು ಮಾಡಿದೆ. ಬಜೆಟ್ನ ಬಳಿಕ ಇಂಧನ ಬೆಲೆ ಹಾಗೂ ಎಲ್ಪಿಜಿ ಬೆಲೆ ಏರಿಕೆಯಾಗಿದೆ" ಎಂದಿದ್ದಾರೆ.
"ಅನ್ನದಾತರು ದೇಶದ ಹಿತದೃಷ್ಟಿಯಿಂದ ಶಾಂತಿಯುತವಾದ ಹೋರಾಟ ಮಾಡುತ್ತಿದ್ದಾರೆ. ಈ ಮೂರು ಕೃಷಿ ಕಾಯ್ದೆಗಳು ರೈತರಿಗೆ ಹಾಗೂ ಕಾರ್ಮಿಕರಿಗಲ್ಲದೇ, ಜನರಿಗೆ ಹಾಗೂ ದೇಶಕ್ಕೆ ಅಪಾಯಕಾರಿ" ಎಂದು ಹೇಳಿದ್ದಾರೆ.
ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಫೆ.6ರ ಶನಿವಾರದಂದು ದೇಶಾದ್ಯಂತ ಚಕ್ಕಾ ಜಾಮ್ ಪ್ರತಿಭಟನೆಗೆ ರೈತರು ಕರೆ ನೀಡಿದ್ದಾರೆ.