ರಾಯಚೂರು, ಫೆ.06 (DaijiworldNews/HR): ಪ್ರೊ.ಭಗವಾನ್ ಮುಖಕ್ಕೆ ಮಸಿ ಬಳಿದಿರುವ ಕುರಿತು ಪ್ರತಿಕ್ರಿಯಿಸಿರುವ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ "ಇದು ಘಟನೆ ಅಲ್ಲ ಇದೊಂದು ಪ್ರತಿಭಟನೆ" ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, "ಯಾರು ಕೂಡ ಸಮಾಜವನ್ನು ಉದ್ರೇಕಗೊಳಿಸುವ ಕೆಲಸ ಮಾಡಬಾರದು, ಭಗವಾನ್ ಅವರ ಈ ರೀತಿಯ ನಡವಳಿಕೆಯೇ ಇಂದು ಈ ರೀತಿ ಪ್ರತಿಭಟನೆ ವ್ಯಕ್ತವಾಗಿದೆ. ಆ ರೀತಿ ಮಾಡಿ ಕೀಳುಮಟ್ಟದ ಪ್ರಚಾರ ಪಡೆಯಬಾರದು. ಈ ಘಟನೆಯಲ್ಲಿ ಇಬ್ಬರೂ ತಪ್ಪು ಮಾಡಿದ್ದಾರೆ" ಎಂದರು.
ಇನ್ನು ನಮ್ಮ ದೇಶದ ಧ್ವಜವನ್ನು ಸುಟ್ಟು ಹಾಕುವವರು, ಅಪಮಾನ ಮಾಡುವವರು ರೈತರಾ ಎಂದು ಪ್ರಶ್ನಿಸಿರುವ ಅವರು, "ಖಲಿಸ್ತಾನದ ಪರ ಮತ್ತು ವಿದೇಶದ ಪರ ಘೋಷಣೆ ಕೂಗುವರನ್ನು ರೈತರೆಂದು ನಾನು ಎಂದಿಗೂ ಒಪ್ಪುವುದಿಲ್ಲ. ದೇಶ ವಿರೋಧಿ ಕೃತ್ಯಗಳನ್ನು ಬೆಂಬಲಿಸುವುದು ಕೂಡ ದೇಶದ್ರೋಹವೇ. ಇಂಥ ಕೃತ್ಯಕ್ಕೆ ನಾವು ಸಹಕರಿಸಬಾರದು" ಎಂದು ಹೇಳಿದ್ದಾರೆ.