ಕೊಚ್ಚಿ, ಫೆ.06 (DaijiworldNews/PY): ಕೊಚ್ಚಿಯಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರ ಕಟೌಟ್ಗೆ ಕಪ್ಪು ಆಯಿಲ್ ಸುರಿದು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ಕೊಚ್ಚಿಯಲ್ಲಿ ಪ್ರತಿಭಟನೆ ಕೈಗೊಂಡಿದ್ದು, ಈ ವೇಳೆ ಸಚಿನ್ನ ಕಟೌಟ್ಗೆ ಆಯಿಲ್ ಸುರಿದು ಪ್ರತಿಭಟಿಸಿದ್ದಾರೆ.
ಭಾರತದಲ್ಲಿ ರೈತರ ಪ್ರತಿಭಟನೆಗೆ ಅಂತರಾಷ್ಟ್ರೀಯ ವ್ಯಕ್ತಿಗಳು ಬೆಂಬಲ ಸೂಚಿಸಿ ಮೈಕ್ರೋ ಬ್ಲಾಗಿಂಗ್ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದರು.
ಸಚಿನ್ ಅವರು ಜಾಗತಿಕ ಸೆಲೆಬ್ರಿಟಿಗಳ ಅಭಿಪ್ರಾಯಗಳ ಬಗ್ಗೆ ಟ್ವೀಟ್ ಮಾಡಿದ್ದು, "ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಕೊಳ್ಳಲು ಸಾಧ್ಯವಿಲ್ಲ ಹಾಗೂ ಬಾಹ್ಯ ಶಕ್ತಿಗಳು ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ" ಎಂದಿದ್ದರು. ಈ ವಿಚಾರವು ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಬೆಂಬಲ ಸೂಚಿಸುವಂತಾಗಿತ್ತು.
ಸಚಿನ್ ಅವರು ಮಾಡಿದ್ದ ಟ್ವೀಟ್ ಬಗ್ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.