ಬೆಂಗಳೂರು, ಫೆ. 05 (DaijiworldNews/SM): ಫೆ. 15ರಿಂದ ದೇಶದೆಲ್ಲೆಡೆ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ. ಆ ಬಳಿಕ ಕರಾವಳಿಯ ಟೋಲ್ ಗಳಲ್ಲೂ ಫಾಸ್ಟ್ಯಾಗ್ ಇಲ್ಲದೆ ಸಂಚರಿಸುವಂತಿಲ್ಲ.
ಫೆ. 15ರಿಂದ ಕಟ್ಟು ನಿಟ್ಟಾಗಿ ನಿಯಮ ಜಾರಿಗೆ ತರಲು ಸರಕಾರ ನಿರ್ಧಾರ ಮಾಡಿದೆ. ಟೋಲ್ ಗೇಟ್ ಗಳಲ್ಲಿ ವಾಹನ ಸಂಚರಿಸಬೇಕಾದಲ್ಲಿ ಫಾಸ್ಟ್ಯಾಗ್ ಅಗತ್ಯವಾಗಿ ಬೇಕಾಗಿದೆ. ಇಲ್ಲದಿದ್ದಲ್ಲಿ, ಟೋಲ್ ಗೇಟ್ ದಾಟಲು ಅವಕಾಶವಿಲ್ಲ ಎಂದು ಹೇಳಲಾಗಿದೆ. ಟೋಲ್ ಗೇಟ್ ದಾಟುವ ಮುನ್ನವೇ ಪಾಸ್ಟ್ಯಾಗ್ ಅಳವಡಿಸಬೇಕು. ಫಾಸ್ಟ್ಯಾಗ್ ಖಾತೆಗೆ ರೀಚಾರ್ಜ್ ಮಾಡಿಸಬೇಕು ಎಂಬುವುದನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿಯ 6 ಟೋಲ್ ಗೇಟ್ ಗಳಲ್ಲಿ ಈ ಕಡ್ಡಾಯ ನಿಯಮ ಜಾರಿಗೆ ಬರಲಿದೆ. ಫಾಸ್ಟ್ಯಾಗ್ ಹಾಗೂ ರೀಚಾರ್ಜ್ ಗೆ ಪಾಯಿಂಟ್ ಆಫ್ ಸೇಲ್ ಕೌಂಟರ್ ಗಳನ್ನು ಪ್ರತೀ ಟೋಲ್ ಗೇಟ್ ನಲ್ಲೂ ಸ್ಥಾಪನೆ ಮಾಡಲಾಗಿದೆ. ಇನ್ನೊಂದೆಡೆ ಕೇಂದ್ರದ ನಿಯಮದ ಪ್ರಕಾರ ಸ್ಥಳೀಯರಿಗೂ ಟೋಲ್ ಶುಲ್ಕ ವಿನಾಯಿತಿ ಇಲ್ಲ. ಈ ಹಿನ್ನೆಲೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಸ್ಥಳೀಯ ಖಾಸಗಿ ಕಾರುಗಳಿಗೆ ವಿಶೇಷ ರಿಯಾಯಿತಿಗೆ ನಿರ್ಧಾರ ನೀಡುವ ನಿಟ್ಟಿನಲ್ಲಿ 20 ಕಿ.ಮೀ. ವ್ಯಾಪ್ತಿಗೆ ಸೀಮಿತವಾಗಿ ಖಾಸಗಿಯವರಿಗೆ ವಿನಾಯಿತಿ ನೀಡಲಾಗಿದ್ದು, ಮಾಸಿಕ 275 ರೂ. ಪಾವತಿಸಿ ಪಾಸ್ ಬಡೆದುಕೊಳ್ಳಲು ಅವಕಾಶವಿದೆ.