ಪುದುಚೇರಿ, ಫೆ.05 (DaijiworldNews/PY): ಯಾರಾದರೂ 5 ಕೋಟಿ.ರೂ ನೀಡಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ವ್ಯಕ್ತಿಯನ್ನು ನೆರೆಯ ಆರ್ಯನ್ಕುಪ್ಪಂ ಹಳ್ಳಿಯ ನಿವಾಸಿ ಸತ್ಯಾನಂದನಂ (43) ಎಂದು ಗುರುತಿಸಲಾಗಿದೆ. ಸತ್ಯಾನಂದನಂ ರಿಯಲ್ ಎಸ್ಟೇಟ್ ಉದ್ಯಮಿ ಎಂದು ತಿಳಿದುಬಂದಿದೆ.
"ಬಂಧಿತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಸತ್ಯಾನಂದನಂ ವಿರುದ್ದ ದ್ವೇಷಭಾಷಣ, ಸಾರ್ವಜನಿಕರಿಗೆ ಮೋಸ ಮಾಡುವುದು ಈ ಆರೋಪಗಳ ಮೇಲೆ ಪ್ರಕರಣ ದಾಖಲಿಲಾಗಿದೆ.
ಯಾರಾದರೂ 5 ಕೋಟಿ.ರೂ ನೀಡಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಿದ್ದ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ, ಈ ಸಂದೇಶವನ್ನು ಗಮನಿಸಿದ ಕಾರು ಚಾಲಕನೋರ್ವ ಇದನ್ನು ಪೊಲೀಸರಿಗೆ ತಿಳಿಸಿದ್ದರು. ಫೇಸ್ಬುಕ್ ಖಾತೆಯನ್ನು ಪತ್ತೆಹಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.