ನವದೆಹಲಿ, ಫೆ.05 (DaijiworldNews/HR): ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರದ್ದೆಂದು ಹೇಳಲಾಗುತ್ತಿರುವ ವಾಟ್ಸ್ಯಾಪ್ ಚ್ಯಾಟ್ ವಿಚಾರವನ್ನು ಲೋಕಸಭೆಯಲ್ಲಿ ಇಂದು ಪ್ರಸ್ತಾಪಿಸಿದ ಶಿವಸೇನೆ ಸಂಸದ ಸಂಜಯ್ ರಾವತ್, "ಅರ್ನಬ್ ಅವರನ್ನು ರಕ್ಷಿಸುತ್ತಿರುವುದಕ್ಕೆ ಕೇಂದ್ರ ಸರಕಾರ ನಾಚಿಕೆಪಡಬೇಕು" ಎಂದು ಹೇಳಿದ್ದಾರೆ.
ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಅವರು, "ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾವತ್ "ಹಾಗಾದರೆ ಇವರನ್ನು ನೀವು ದೇಶದ್ರೋಹಿಗಳೆಂದು ಕರೆಯುತ್ತೀರಿ? ಅವರು ದೇಶದ್ರೋಹಿಗಳಾದರೆ ನಮ್ಮ ದೇಶದಲ್ಲಿ ಯಾರು ದೇಶಭಕ್ತರು? ಅರ್ನಬ್ ಗೋಸ್ವಾಮಿ? ಕಂಗನಾ ರಣಾವತ್?" ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನು "ಮಹಾರಾಷ್ಟ್ರದಲ್ಲಿ ಒಬ್ಬ ಅಮಾಯಕ ವ್ಯಕ್ತಿ ಯಾರಿಂದಾಗಿ ಆತ್ಮಹತ್ಯೆ ಮಾಡಿಕೊಂಡರೋ ಹಾಗೂ ದೇಶದ ಅಧಿಕೃತ ಗೌಪ್ಯತಾ ವಿಚಾರಗಳು ಯಾರೊಂದಾಗಿ ಸೋರಿಕೆಯಾದವೋ ಅವರು ನಿಮ್ಮ ಸೇವೆಯಲ್ಲಿದ್ದಾರೆ, ನಿಮ್ಮ ರಕ್ಷಣೆಯಲ್ಲಿದ್ದಾರೆ. ಇದು ದೇಶದ ಭದ್ರತೆಯ ವಿಚಾರ, ನೀವು ಈ ಕುರಿತು ಮಾತನಾಡುವುದಿಲ್ಲ" ಎಂದು ರಾವತ್ ಕಿಡಿಕಾರಿದ್ದಾರೆ.