ಉತ್ತರಕಾಶಿ, ಫೆ.05 (DaijiworldNews/PY): ಉತ್ತರಾಖಂಡದ ಬಾರ್ಕೊಟ್ ಪಟ್ಟಣದಲ್ಲಿ ಸಂಭವಿಸಿದ ಭಾರೀ ಹಿಮಪಾತದಲ್ಲಿ ಸಿಲುಕಿದ್ದ 12 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸಿದೆ.
ಸಾಂದರ್ಭಿಕ ಚಿತ್ರ
ಉತ್ತರಾಖಂಡದ ಬಾರ್ಕೊಟ್ ಪಟ್ಟಣದ ರಸ್ತೆಯಲ್ಲಿ ಭಾರೀ ಹಿಮಪಾತವಾದ ಕಾರಣ 3-4 ವಾಹನಗಳು ಸೇರಿದಂತೆ 10 ಮಂದಿ ಹಿಮಪಾತದಲ್ಲಿ ಸಿಲುಕಿದ್ದರು. ಹಿಮಪಾತದ ಸಂಭವಿಸಿದ ಪರಿಣಾಮ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಎಸ್ಡಿಆರ್ಎಫ್ ತಿಳಿಸಿದೆ.
ಎಸ್ಡಿಆರ್ಎಫ್ ರಕ್ಷಿಸಿ 12 ಮಂದಿ ವಿವಾಹ ಸಮಾರಂಭಕ್ಕೆ ಪಾಲ್ಗೊಳ್ಳುವ ಸಲುವಾಗಿ ಅಗೋಡಾದಿಂದ ಓಜ್ರಿಗೆ ಹೋಗುತ್ತಿದ್ದರು ಎಂದು ಎಸ್ಡಿಆರ್ಎಫ್ ಹೇಳಿದೆ.