ನವದೆಹಲಿ, ಫೆ.05 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2021-22ನೇ ಹಣಕಾಸು ಸಾಲಿನ ಕೇಂದ್ರ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದ್ದು, "ದೇಶ ಕಾಯುವ ಸೈನಿಕರಿಗೆ ಯಾವುದೇ ಬೆಂಬಲ ದೊರೆತಿಲ್ಲ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪ್ರಧಾನಿ ಮೋದಿ ಅವರ 2021-22ನೇ ಹಣಕಾಸು ಸಾಲಿನ ಕೇಂದ್ರ ಬಜೆಟ್ ಎಂದರೆ, ಕಠಿಣ ಪರಿಸ್ಥತಿಯಲ್ಲಿ ಗಡಿಯಲ್ಲಿ ಚೀನಾದ ಆಕ್ರಮಣವನ್ನು ಎದುರಿಸುತ್ತಿರುವ ಜವಾನರಿಗೆ ಯಾವುದೇ ಬೆಂಬಲ ದೊರೆತಿಲ್ಲ. ಯೋಧರಿಗೆ ದ್ರೋಹ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಕಿರು, ಸಣ್ಣ ಹಾಗೂ ಮಧ್ಯಮ ಪ್ರಮಾಣ ಉದ್ಯಮ ವಲಯದ ಕೆಲಸಗಾರರಿಗೂ ಮೋದಿ ಬಜೆಟ್ನಲ್ಲಿ ದ್ರೋಹ ಮಾಡಲಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಹೆಚ್ಚು ತೊಂದರೆಗೆ ಒಳಗಾಗಿರುವ ಕಿರು, ಸಣ್ಣ ಹಾಗೂ ಮಧ್ಯಮ ಪ್ರಮಾಣ ಉದ್ಯಮ ವಲಯದ ಕೆಲಸಗಾರರಿಗೆ ಕಡಿಮೆ ಬಡ್ಡಿಯ ಸಾಲವನ್ನು ಕೂಡಾ ನೀಡಿಲ್ಲ. ಅಲ್ಲದೇ, ಜಿಎಸ್ಟಿ ನೆರವನ್ನು ನೀಡಿಲ್ಲ" ಎಂದಿದ್ದಾರೆ.