ನವದೆಹಲಿ,ಫೆ.05 (DaijiworldNews/HR): "ಆರ್ಬಿಐ ರೆಪೋ ದರದಲ್ಲಿ ಯಾವುದೇ ಬದಲಾವನೆ ಇಲ್ಲದೆ ಶೇ. 4 ರಷ್ಟು ಮುಂದುವರಿಸಲು ನಿರ್ಧರಿಸಲಾಗಿದೆ" ಎಂದು ಆರ್ಬಿಐ ಮುಖ್ಯಸ್ಥ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ ರೆಪೊ ದರವನ್ನು ಶೇ.4ರಷ್ಟು ಮತ್ತು ರಿವರ್ಸ್ ರೆಪೊ ದರವನ್ನು ಶೇ.3.35ಕ್ಕೆ ಇಳಿಕೆ ಮಾಡಲು ನಿರ್ಧರಿಸಿದ್ದು, 2021ರ ಬಜೆಟ್ ನಂತರ ಆರು ಸದಸ್ಯರ ಹಣಕಾಸು ನೀತಿ ಸಮಿತಿಯ ಮೊದಲ ಸಭೆಯ ಈ ನೀತಿ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇನ್ನು ಕೊರೊನಾದಿಂದಾಗಿ ಆರ್ಥಿಕತೆಯನ್ನು ಚೇತರಿಕೆ ಮಾಡಲು ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ಸಾಲ ದರ (ರೆಪೊ ದರ)ವನ್ನು ಮಾರ್ಚ್ 2020ರಿಂದ 115 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿದು, ಕೇಂದ್ರೀಯ ಬ್ಯಾಂಕ್ ಕಳೆದ ಮೇ 22, 2020ರಂದು ತನ್ನ ನೀತಿ ದರವನ್ನು ಕಡಿತಮಾಡಿತ್ತು, ಇದೀಗ ಕೊರೊನಾ ಆರ್ಥಿಕತೆಗೆ ಅಭೂತಪೂರ್ವ ಸವಾಲನ್ನು ಒಡ್ಡಿದ್ದು, ಅಂದಿನಿಂದ ಬ್ಯಾಂಕಿಂಗ್ ನಿಯಂತ್ರಕವು ರೆಪೊ ದರವನ್ನು ಕಾಯ್ದುಕೊಂಡಿದ್ದು, ವಾಣಿಜ್ಯ ಬ್ಯಾಂಕ್ಗಳಿಗೆ ಆರ್ಬಿಐ ಸಾಲ ನೀಡುವ ಪ್ರಮುಖ ಬಡ್ಡಿದರ 19 ವರ್ಷಗಳ ಕನಿಷ್ಠ ಮಟ್ಟದಲ್ಲಿ 4 ಪ್ರತಿಶತದಷ್ಟು ಸ್ಥಿರವಾಗಿದೆ.