ನವದೆಹಲಿ,ಫೆ.05 (DaijiworldNews/HR): ರೈತರ ಪ್ರತಿಭಟನೆ ಬಗ್ಗೆ ಮಾಡಿರುವ ಟ್ವೀಟ್ಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಪರಿಸರವಾದಿ ಗ್ರೆಟಾ ಥನ್ಬರ್ಗ್ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ನಾಯಕ ಹಾಗೂ ರಾಜಕಾರಣಿ ಕನ್ನಯ್ಯ ಕುಮಾರ್ ಗ್ರೆಟಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕನ್ನಯ್ಯ ಕುಮಾರ್, "ಪ್ರೀತಿಯ ಗ್ರೆಟಾ ಥನ್ಬರ್ಗ್ ನಿಮಗೆ ನಮ್ಮ ಕ್ಲಬ್ಗೆ ಸ್ವಾಗತ. ದೆಹಲಿ ಪೊಲೀಸರು ಜಯ್ ಶಾ ಅವರ ತಂದೆಯ ನಿರ್ದೇಶನದ ಮೇರೆಗೆ ನಿಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನೀವು ಉತ್ತಮ ದಾರಿಯಲ್ಲಿ ಹೋರಾಟ ನಡೆಸುತ್ತಿದ್ದು ಸರಿಯಾದ ದಿಕ್ಕಿನಲ್ಲಿ ಇತಿಹಾಸ ನಿರ್ಮಿಸಲಿದ್ದೀರಿ, ಇದರ ಭಾಗವಾಗಿ ನನ್ನ ಹಲವು ಸ್ನೇಹಿತರು ಈಗಾಗಲೇ ಜೈಲಿನಲ್ಲಿದ್ದಾರೆ, ನೀವು ನಿರಂತರವಾಗಿ ಹೋರಾಟ ಮಾಡುತ್ತಿರಿ" ಎಂದು ಹೇಳಿದ್ದಾರೆ.
ಇನ್ನು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಗ್ರೆಟಾ ಥನ್ಬರ್ಗ್, ಸಹಾಯವಿದ್ದವರಿಗೆ ಟೂಲ್ ಕಿಟ್ ಗಳನ್ನು ನೀಡುವುದಾಗಿ ಟ್ವೀಟ್ ಮಾಡಿದ್ದರು.
ಗ್ರೆಟಾ ಥನ್ಬರ್ಗ್ ವಿರುದ್ಧ ನಿನ್ನೆ ಎಫ್ಐಆರ್ ದಾಖಲಾದ ನಂತರವೂ ಅವರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, "ದ್ವೇಷ, ಬೆದರಿಕೆಗಳಿಗೆ ಹೆದರುವುದಿಲ್ಲ, ಮಾನವ ಹಕ್ಕುಗಳ ಉಲ್ಲಂಘನೆಯಿಂದ ನನ್ನ ನಿಲುವು ಬದಲಾಗುವುದಿಲ್ಲ" ಎಂದು ಹೇಳಿದ್ದಾರೆ.