ಬೆಂಗಳೂರು,ಫೆ.05 (DaijiworldNews/HR): ಕರ್ನಾಟಕದ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೊಹಮ್ಮದ್ ನಲಪಾಡ್ ಮತ್ತು ರಕ್ಷಾ ರಾಮಯ್ಯ
ಜನವರಿ 12 ರಿಂದ ಮೂರು ಹಂತಗಳಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ 64,203 ಮತ ಪಡೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ನಲಪಾಡ್ ಅವರ ಮೇಲಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಫೌಂಡೇಷನ್ ಫಾರ್ ಅಡ್ವಾನ್ಸ್ಡ್ ಮ್ಯಾನೇಜ್ ಮೆಂಟ್ ಆಫ್ ಎಲೆಕ್ಷನ್ಸ್ ಸಮಿತಿಯು ಅವರ ಆಯ್ಕೆಮಾಡದಿರಲು ನಿರ್ಧರಿಸಿದೆ.
ಇನ್ನು ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅವರ ಬಳಿಕ 57,271 ಮತಗಳಿಸಿರುವ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಇತರ ಅಭ್ಯರ್ಥಿಗಳಾದ ಮಂಜಿನಾಥ್ ಮತ್ತು ಮಿಥುನ್ ರೈ ಕ್ರಮವಾಗಿ 18,137 ಮತ್ತು 3,104 ಮತಗಳನ್ನು ಪಡೆದಿದ್ದಾರೆ.