ಬೆಂಗಳೂರು, ಫೆ. 04 (DaijiworldNews/SM): ಕರ್ನಾಟಕ ವಿಧಾನ ಪರಿಷತ್ತಿನ ಸಭಾಧ್ಯಕ್ಷ ಸ್ಥಾನಕ್ಕೆ ಕೆ.ಪ್ರತಪಚಂದ್ರ ಶೆಟ್ಟಿ ಅವರು ರಾಜೀನಾಮೆ ನೀಡಿದ್ದಾರೆ.
ಪ್ರತಾಪ್ ಚಂದ್ರ ಶೆಟ್ಟಿಯವರ ವಿರುದ್ಧ ಅವಿಶ್ವಾಸ ಮಂಡನೆಗೆ ಬಿಜೆಪಿ ಹಾಗೂ ಜೆಡಿಎಸ್ ಸಿದ್ಧತೆ ನಡೆಸಿರುವಂತೆಯೇ ಸಭಾಧಕ್ಷರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಉಂಟಾಗಬಹುದಾದ ಅವಮಾನದಿಂದ ತಪ್ಪಿಸಿಕೊಂಡಂತಾಗಿದೆ.
ಅಧಿವೇಶನ ಮುಗಿದ ನಂತರ ರಾಜ್ಯ ವಿಧಾನ ಪರಿಷತ್ತಿನ ಅಧ್ಯಕ್ಷರು ತಮ್ಮ ರಾಜೀನಾಮೆಯನ್ನು ಸದನದ ಉಪಾಧ್ಯಕ್ಷರಿಗೆ ಸಲ್ಲಿಸುತ್ತಾರೆ. ಇನ್ನು ಪ್ರತಾಪ್ ಚಂದ್ರ ಶೆಟ್ಟಿಯವರು ಕರಾವಳಿ ಮೂಲದ ದಕ್ಷ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದರು.