ಬೆಂಗಳೂರು, ಫೆ.04 (DaijiworldNews/PY): "ರಾಜ್ಯ ಸರ್ಕಾರ ಅದಾನಿ ಒಡೆತನದ ಪವರ್ ಕಾರ್ಪೋರೇಶನ್ಗೆ ಯಾವುದೇ ಹೆಚ್ಚುವರಿ ಹಣ ನೀಡುತ್ತಿಲ್ಲ" ಎಂದು ಗೃ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿಎಂ ಅವರ ಬದಲು ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, "ಸಿಆರ್ಸಿ ಆದೇಶದ ಅನ್ವಯ ಪ್ರತಿ ಯುನಿಟ್ಗೆ 1.45 ರೂ ನಿಗದಿಪಡಿಸಲಾಗಿದೆ. ಆಗಾಗ ಕಲ್ಲಿದ್ದಲು, ಸುಣ್ಣದ ಕಲ್ಲು, ತೈಲ ದರ ಏರಿಕೆ, ಇಳಿಕೆ ಆಗುತ್ತದೆ. ಪ್ರತಿ ಯುನಿಟ್ಗೆ, ಎಪ್ರಿಲ್ 2020ರಿಂದ ಡಿಸೆಂಬರ್ 2020ರ ತನಕ ಕನಿಷ್ಠ 2.75 ರೂ ಹಾಗೂ ಗರಿಷ್ಠ 3.72 ರೂ ನಿಗದಿಪಡಿಸಲಾಗಿದೆ" ಎಂದರು.
"ಕೆಇಆರ್ಸಿ ಹಾಗೂ ಸಿಇಆರ್ಸಿ ನಿಯಮಾವಳಿಯ ಪ್ರಕಾರ ನಿಭಾಯಿಸಲಾಗುತ್ತಿದ್ದು, ಈ ಹಿನ್ನೆಲೆ ವಿದ್ಯುತ್ ಸರಬರಾಜು ಕಂಪೆನಿ 1,600 ಕೋಟಿ.ರೂ ನಷ್ಟದಲ್ಲಿದೆ. ಅದಾನಿ ಕಂಪೆನಿಗೆ ಹೆಚ್ಚುವರಿಯಾಗಿ ಯಾವುದೇ ಹಣ ಕೊಟ್ಟಿಲ್ಲ. ನಿಯಮಗಳ ಪ್ರಕಾರವೇ ಹಣ ಪಾವತಿ ಮಾಡಲಾಗಿದೆ" ಎಂದು ತಿಳಿಸಿದರು.