ನವದೆಹಲಿ, ಫೆ.04 (DaijiworldNews/HR): ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗುರುವಾರದಂದು ನಡೆದ 'ಸ್ವಿಚ್ ದೆಹಲಿ' ಅಭಿಯಾನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚಾಲನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಗರದಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ಜನರು ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸಬೇಕು. ದೆಹಲಿ ಸರ್ಕಾರವು ಮುಂದಿನ ಆರು ವಾರಗಳಲ್ಲಿ ವಿವಿಧ ಕಾರ್ಯಗಳಿಗಾಗಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಾಡಿಗೆಗೆ ಪಡೆಯಲಿದೆ" ಎಂದರು.
"ದೊಡ್ಡ ಕಂಪನಿಗಳು ಸೇರಿದಂತೆ ಮಾಲ್ಗಳು ಹಾಗೂ ಚಿತ್ರ ಮಂದಿರಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಬೇಕು, ಅದಕ್ಕಾಗಿಯೇ ತಮ್ಮ ಸಂಸ್ಥೆಯ ಆವರಣದಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸಬೇಕು" ಎಂದು ಹೇಳಿದ್ದಾರೆ.
ಇನ್ನು ದೆಹಲಿ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯು ವಿಶ್ವದ ಅತ್ಯುತ್ತಮ ನೀತಿಗಳಲ್ಲಿ ಒಂದಾಗಿದ್ದು, ಇದನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲಾಗುವುದು" ಎಂದರು.