ಬೆಂಗಳೂರು,ಫೆ.04 (DaijiworldNews/HR): ಹಿಂದೂ ಧರ್ಮ ಮತ್ತು ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಸಾಹಿತಿ ಪ್ರೊ.ಭಗವಾನ್ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಅವರು ಕೋರ್ಟ್ ಆವರಣದಲ್ಲೇ ಮಸಿ ಬಳಿದಿರುವ ಘಟನೆ ನಡೆದಿದೆ.
ಪ್ರೊ.ಭಗವಾನ್ ಅವರು ಪ್ರಕರಣ ಒಂದರಲ್ಲಿ ಜಾಮೀನು ಪಡೆಯಲು ಕೋರ್ಟ್ಗೆ ಆಗಮಿಸಿದ್ದು, ಈ ವೇಳೆ ವಕೀಲೆ ಮೀರಾ ರಾಘವೇಂದ್ರ ಅವರು ಭಗವಾನ್ ಮುಖಕ್ಕೆ ಮಸಿ ಬಳಿದು ಯಾವಾಗಲು ದೇವರ ಬಗ್ಗೆ ರಾಮನ ಬಗ್ಗೆ ಮಾತಾಡ್ತಿರ ನಾಚಿಕೆ ಆಗಲ್ವಾ ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇನ್ನು ಈ ವೇಳೆ ಭಗವಾನ್ ಅವರು ಮೀರಾನನ್ನು ಬ್ಂಧಿಸುವಂತೆ ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸುವ ಮೀರಾ ನಾನು ಎಲ್ಲದಕ್ಕೂ ರೆಡಿ, ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಈ ಕುರಿತು ದೂರು ನೀಡಲು ಬೆಂಗಳೂರಿನ ಹಲಸೂರು ಠಾಣೆಗೆ ಪ್ರೊ.ಕೆ.ಎಸ್.ಭಗವಾನ್ ತೆರಳಿದ್ದಾರೆ ಎನ್ನಲಾಗಿದೆ.