ಉತ್ತರ ಪ್ರದೇಶ, ಫೆ.04 (DaijiworldNews/PY): ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರ ಬೆಂಗಾವಲು ಪಡೆಯ ನಾಲ್ಕು ವಾಹನಗಳು ಗುರುವಾರ ಬೆಳಗ್ಗೆ ಪಶ್ಚಿಮ ಉತ್ತರಪ್ರದೇಶದ ಹಾಪುರ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿವೆ.
ಪ್ರಿಯಾಂಕ ಗಾಂಧಿ ಅವರು ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯ ಸಂದರ್ಭ ಸಾವನ್ನಪ್ಪಿದ್ದ ಯುವಕ ನವ್ರೀತ್ ಸಿಂಗ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಲು ಹಾಪುರ ಜಿಲ್ಲೆಯ ರಾಮಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಪ್ರಿಯಾಂಕ ಗಾಂಧಿ ಅವರೊಂದಿಗೆ ಯುಪಿ ಕಾಂಗ್ರೆಸ್ ರಾಜ್ಯ ಘಟಕದ ಮುಖಂಡ ಅಜಯ್ ಕುಮಾರ್ ಲಲ್ಲೂ ಕೂಡಾ ಇದ್ದರು.
ಈ ಅಪಘಾತವು ಹಾಪುರ ಜಿಲ್ಲೆಯ ಮುಕ್ತೇಶ್ವರ ಪ್ರದೇಶದಲ್ಲಿ ನಡೆದಿದೆ. ಅಪಘಾತದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಪ್ರಿಯಾಂಕ ಗಾಂಧಿ ಅವರನ್ನು ಎಸ್ಯುವಿ ಸೇರಿದಂತೆ ನಾಲ್ಕು ವಾಹನಗಳು ಹಿಂಬಾಲಿಸುತ್ತಿದ್ದವು ಎಂದು ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಆಗಿರುವ ವಿಡಿಯೋದಲ್ಲಿ ತಿಳಿದುಬಂದಿದೆ.