ನವದೆಹಲಿ,ಫೆ.04 (DaijiworldNews/HR): ಏಳು ದಿನಗಳ ವಿರಾಮದ ಬಳಿಕ ಗುರುವಾರ ದೆಹಲಿಯಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 35 ಪೈಸೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ ಗುರುವಾರ ಪೆಟ್ರೋಲ್ ಬೆಲೆಯನ್ನು 35 ಪೈಸೆ ಹೆಚ್ಚಿಸಲಾಗಿದ್ದು, ಲೀಟರ್ ಗೆ 86.65 ರೂ.ತಲುಪಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.
ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 35 ಪೈಸೆ ಹೆಚ್ಚಿಸಿದ್ದು, ಆ ಮೂಲಕ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ಗೆ ಪೆಟ್ರೋಲ್ ಬೆಲೆ 86.65 ರೂಗೆ ಏರಿಕೆಯಾಗಿ ಡೀಸೆಲ್ ಬೆಲೆ ಕೂಡ ಲೀಟರ್ಗೆ 35 ಪೈಸೆ ಏರಿಕೆಯಾಗಿದ್ದು, ಡೀಸೆಲ್ ಲೀಟರ್ಗೆ. 76.83ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ.
ಇನ್ನು ಮುಂಬೈಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 93.18ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ ಪ್ರತೀ ಲೀಟರ್ ಗೆ 83.65ರೂಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 89.52ಕ್ಕೆ ಏರಿಕೆಯಾಗಿದ್ದು, ಡೀಸೆಲ್ ದರ 81.42 ರೂಗೆ ಏರಿಕೆಯಾಗಿದೆ.