ನವದೆಹಲಿ, ಫೆ.04 (DaijiworldNews/MB) : ''ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾದ ಬಳಿಕ ಚೀನಾ ದೇಶದ ಸೇನಾಪಡೆಗೆ ಭೀತಿ ಉಂಟಾಗಿದ್ದು ಈ ಹಿನ್ನೆಲೆ ಪೂರ್ವ ಲಡಾಕ್ಗೆ ಸಮೀಪದ ಪ್ರದೇಶದಲ್ಲಿ ಜೆ-20 ಯುದ್ಧ ವಿಮಾನವನ್ನು ಚೀನಾ ನಿಯೋಜಿಸಿದೆ'' ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ ಹೇಳಿದ್ದಾರೆ.
''ನಮಗೆ ಚೀನಾ ಸೈನ್ಯದ ಸಾಮರ್ಥ್ಯ ಮತ್ತು ಕಾರ್ಯವಿಧಾನ ಬಗ್ಗೆ ತಿಳಿದ್ದಿದ್ದು ನಾವು ಚೀನಾ ಸೇನೆಯನ್ನು ಎದುರಿಸಲು ಸಮರ್ಥರಾಗಿದ್ದೇವೆ ಎಂದು ಹೇಳಿದ ಅವರು, ಭಾರತ-ಚೀನಾ ಗಡಿಭಾಗದಲ್ಲಿ ಸೇನೆ ನಿಯೋಜನೆ ವಿಚಾರದ ಬಗ್ಗೆ ಮಾತುಕತೆ ಮುಂದುವರಿದಿದೆ'' ಎಂದು ಹೇಳಿದರು.
''ಮಾತುಕತೆ ಯಾವ ರೀತಿ ಮುಂದುವರೆಯುತ್ತದೆ ಎಂಬುದರ ಮೇಲೆ ಎಲ್ಲವೂ ಇದೆ. ಸೇನೆ ವಾಪಾಸ್ ಪಡೆಯುವ ಪ್ರಕ್ರಿಯೆ ಪ್ರಾರಂಭವಾದರೆ ಒಳಿತು. ಆದರೆ ಅದು ನಡೆಯದೆ ಬೇರೆ ಏನಾದರೂ ನಾವು ಎದುರಿಸಲು ಸಿದ್ದ'' ಎಂದು ತಿಳಿಸಿದರು.
''ಚೀನಾ ಕೆಲವು ವಾಯುಪಡೆಯನ್ನು ವಾಪಾಸ್ ಪಡೆದಿದೆ. ಆದರೆ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿದೆ'' ಎಂದು ಹೇಳಿದರು.