ಜಮ್ಮು, ಫೆ.04 (DaijiworldNews/MB) : ಪಾಕಿಸ್ತಾನ ಸೇನೆಯು ಬುಧವಾರ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಸಮೀಪ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ರಾಜಸ್ಥಾನದ ಜೋಧ್ಪುರನ ನಿವಾಸಿ ಸಿಪಾಯಿ ಲಕ್ಷ್ಮಣ್ ಅವರು ಹುತಾತ್ಮ ಯೋಧ.
ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ವಕ್ತಾರರು, ಪಾಕಿಸ್ತಾನ ಸೇನೆಯು ಸುಂದರ್ಬನಿಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ದಾಳಿ ನಡೆಸಿದೆ. ಈ ಮುಖೇನ ಕದನ ವಿರಾಮ ಉಲ್ಲಂಘನೆ ಮಾಡಿದೆ. ಆದರೆ ಭಾರತವೂ ಇದಕ್ಕೆ ತಕ್ಕ ಉತ್ತರ ನೀಡಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ದಾಳಿ ಸಂದರ್ಭ ಲಕ್ಷ್ಮಣ್ ಗಂಭೀರವಾಗಿ ಗಾಯಗೊಂಡಿದ್ದರು. ಕ್ಷ್ಮಣ್ ಅವರು ಧೈರ್ಯಶಾಲಿ ಮತ್ತು ಪ್ರಾಮಾಣಿಕ ಯೋಧರಾಗಿದ್ದರು. ಅವರ ತ್ಯಾಗವನ್ನು ದೇಶ ಮರೆಯದು ಹೇಳಿದ್ದಾರೆ.
ಇನ್ನು ಈ ವರ್ಷ ಪಾಕಿಸ್ತಾನ ಮಾಡಿದ ಕದನ ವಿರಾಮ ಉಲ್ಲಂಘನೆಯಿಂದಾಗಿ ಒಟ್ಟು ನಾಲ್ವರು ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.