ನವದೆಹಲಿ, ಫೆ.04 (DaijiworldNews/HR): ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಕೆಂಪುಕೋಟೆ ಮೇಲೆ ಅನ್ಯ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಬಂಧಿತ ಆರೋಪಿಯನ್ನು ಧರ್ಮೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಜನವರಿ 26 ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಪೆರೇಡ್ಗೆ ರೈತರು ಕರೆ ನೀಡಿದ್ದು, ಈ ಸಂದರ್ಭ ನಿಗದಿತ ಮಾರ್ಗದ ಒಪ್ಪಂದವನ್ನು ಮೀರಿ ರೈತರು ದೆಹಲಿ ಪ್ರವೇಶಿಸಿದ್ದು, ಪೊಲೀಸರ ಜೊತೆ ಸಂಘರ್ಷಕ್ಕೆ ಇಳಿದಿದ್ದರು. ಬ್ಯಾರಿಕೇಡ್ ಮುರಿದು ಕಲ್ಲು ತೂರಾಟ ನಡೆಸಿದ್ದರು.
ಇನ್ನು ಹಲವು ರೈತರು ಟ್ರ್ಯಾಕ್ಟರ್ ಓಡಿಸಿಕೊಂಡು ಕೆಂಪು ಕೋಟೆ ಪ್ರವೇಶಿಸಿ ದಾಂಧಲೆ ನಡೆಸಿ, ಸ್ತಬ್ಧಚಿತ್ರಗಳಿಗೆ ಹಾನಿ ಮಾಡಿದ್ದರು. ಬಳಿಕ ಅನ್ಯ ಧ್ವಜ ಹಾರಿಸಿದ್ದರು.