ಬೆಂಗಳೂರು, ಫೆ.04 (DaijiworldNews/MB) : ಶಿವಮೊಗ್ಗ ಕಲ್ಲು ಕ್ವಾರಿಯಲ್ಲಿನ ದುರಂತದ ಬಳಿಕ ಇದೀಗ ರಾಜ್ಯದಲ್ಲಿರುವ ಎಲ್ಲಾ ಕಲ್ಲು ಕ್ವಾರಿಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಸರ್ಕಾರವು ಕ್ವಾರಿಗಳ ಬಗೆಗೆ ಡ್ರೋನ್ ಸಮೀಕ್ಷೆ ನಡೆಸುವುದಾಗಿ ಹೇಳಿದ್ದು ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶ ಎ.ಎಸ್. ಓಕಾ, ನ್ಯಾಯಾಧೀಶ ಸಚಿನ್ ಶಂಕರ್ ಮುಗುಮ್ ಅವರನ್ನು ಒಳಗೊಂಡ ಪೀಠ ಈ ಸೂಚನೆಯನ್ನು ನೀಡಿದೆ.
ಹೈಕೋರ್ಟ್ ವಿಭಾಗೀಯ ಪೀಠ, ''ಕಲ್ಲು ಕ್ವಾರಿಗಳಲ್ಲಿ ನಿಯಮ ಪಾಲನೆ ಆಗುತ್ತಿದೆಯೆ'' ಎಂದು ಪ್ರಶ್ನಿಸಿದೆ.
''ನಿಯಮ ಪಾಲಿಸದ ಕ್ವಾರಿಗಳ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ'' ಎಂದು ಕೂಡಾ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದ್ದು ಮುಂದಿನ ವಿಚಾರಣೆಯನ್ನು ಮಾರ್ಚ್ 8ಕ್ಕೆ ಮುಂದೂಡಲಾಗಿದೆ.