ನವದೆಹಲಿ, ಫೆ.03 (DaijiworldNews/PY): "ರೈತರ ಪ್ರತಿಭಟನೆಯನ್ನು ಇನ್ನೊಂದು ಶಾಹೀನ್ಬಾಗ್ ಆಗಿಸಬೇಡಿ" ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಬಿಜೆಪಿ ತಿಳಿಸಿದೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದಿಸುವ ನಿರ್ಣಯದ ಬಳಿಕ ಮಾತನಾಡಿದ ಬಿಜೆಪಿ ಸಂಸದ ಭುವನೇಶ್ವರ ಕಲಿತಾ, "ಹೊಸ ಕೃಷಿ ಕಾನೂನುಗಳ ಬಗ್ಗೆ ಮಾತನಾಡಲು ಕೆಂದ್ರ ಸರ್ಕಾರ ಎಂದಿಗೂ ಸಿದ್ದವಾಗಿರುತ್ತದೆ, ಆದರೆ, ರೈತರ ಪ್ರತಿಭಟನೆಯನ್ನು ಇನ್ನೊಂದು ಶಾಹೀನ್ಬಾಗ್ ಆಗಿಸಬೇಡಿ" ಎಂದಿದ್ದಾರೆ.
"ರೈತರ ಬಗ್ಗೆ ಸರ್ಕಾರಕ್ಕೆ ಗೌರವವಿದೆ. ರೈತರೊಂದಿಗಿನ ಮಾತುಕತೆಗೆ ಎಂದಿಗೂ ಬಾಗಿಲು ತೆರೆದಿರುತ್ತದೆ" ಎಂದು ಹೇಳಿದ್ದಾರೆ.
"ಸರ್ಕಾರ ಹೊಸ ಕಾಯ್ದೆಗಳ ಮುಖಾಂತರ ರೈತರಿಗೆ ನೂತನ ಹಕ್ಕುಗಳನ್ನು ಒದಗಿಸಿದೆ. ಸಂಸತ್ನಲ್ಲಿ ವಿಸ್ತೃತವಾದ ಚರ್ಚೆ ನಡೆಸಿದ ಬಳಿಕ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಗಳ ಮೂಲಕ ರೈತರ ಸೌಲಭ್ಯಗಳನ್ನು ಕಸಿದುಕೊಂಡಿಲ್ಲ" ಎಂದಿದ್ದಾರೆ.