ಲಕ್ನೋ, ಫೆ.03 (DaijiworldNews/MB) : ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು ಬುಧವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಗಡಿಗಳಲ್ಲಿ ಮುಳ್ಳುತಂತಿಗಳು ಹಾಕಿ ರೈತರ ವಿರುದ್ದವಾಗಿ ಅಲ್ಲ ಎಂದು ಎಂದು ಹೇಳಿದ್ದಾರೆ.
ದೆಹಲಿ ಗಡಿಯಲ್ಲಿರುವ ರೈತರ ಪ್ರತಿಭಟನಾ ಸ್ಥಳಗಳಲ್ಲಿ ಕಬ್ಬಿಣದ ಸರಳುಗಳು ಹಾಗೂ ಮುಳ್ಳುತಂತಿಗಳನ್ನು ಹಾಕಿ ಬ್ಯಾರಿಕೇಡ್ಗಳು ಮತ್ತು ಕಾಂಕ್ರೀಟ್ ಚಪ್ಪಡಿಗಳನ್ನು ಇರಿಸಿರುವ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ.
''ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಬೇಡಿಕೆಯ ಮೇಲೆ, ವಿಶೇಷವಾಗಿ ದೆಹಲಿಯ ಗಡಿಗಳಲ್ಲಿ, ಆಂದೋಲನ ನಡೆಸುತ್ತಿರುವ ರೈತರ ಬಗ್ಗೆ ಸರ್ಕಾರ ಹೊಂದಿರುವ ಮನೋಭಾವವು ಬಜೆಟ್ ಅಧಿವೇಶನದಲ್ಲಿ ಮೊದಲ ದಿನದಿಂದಲೇ ಪರಿಣಾಮ ಬೀರುತ್ತಿವೆ. ಕೇಂದ್ರವು ರೈತರ ಬೇಡಿಕೆಯನ್ನು ಈಡೇರಿಸಬೇಕು ಮತ್ತು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಬೇಕು'' ಎಂದು ಆಗ್ರಹಿಸಿದ್ದಾರೆ.
''ಅಲ್ಲದೆ, ಲಕ್ಷಾಂತರ ರೈತ ಕುಟುಂಬಗಳಲ್ಲಿ ಭೀತಿ ಹರಡಲು ದೆಹಲಿಯ ಗಡಿಯಲ್ಲಿ ಮುಳ್ಳುತಂತಿ, ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಇದರ ಬದಲು, ಭಯೋತ್ಪಾದಕರನ್ನು ತಡೆಯುವ ನಿಟ್ಟಿನಲ್ಲಿ ಇಂತಹ ಕ್ರಮವನ್ನು ದೇಶದ ಗಡಿಯಲ್ಲಿ ಕೈಗೊಂಡರೆ ಉತ್ತಮ'' ಎಂದು ಹೇಳಿದ್ದಾರೆ.