ನವದೆಹಲಿ, ಫೆ.03(DaijiworldNews/HR): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮ ಸಿದ್ಧತೆಯ ಹಂತದಲ್ಲಿದದು, ಅದನ್ನು ಜಾರಿ ಮಾಡಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಈ ಕುರಿತು ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್, "ಲೋಕಸಭೆ ಮತ್ತು ರಾಜ್ಯಸಭೆಗಾಗಿ ಇರುವ ಸಮಿತಿಗಳು ಈ ಅಂಶ ಪರಿಶೀಲನೆ ನಡೆಸುತ್ತಿದ್ದು, ಅವುಗಳಿಗೆ ನೀಡಲಾಗಿರುವ ಅವಧಿಯನ್ನು ಕ್ರಮವಾಗಿ ಏ.9, ಜು.9ಕ್ಕೆ ವಿಸ್ತರಿಸಲಾಗಿದೆ. ಈಗಾಗಲೇ ಅನುಮೋದನೆ ಪಡೆದು ಕೊಂಡಿರುವ ಸಿಎಎ ನಿಯಮಗಳನ್ನು ಸಿದ್ಧಗೊಳಿಸಿ, ಜಾರಿ ಮಾಡಲು ಹೆಚ್ಚಿನ ಸಮಯ ಬೇಕಾಗಬಹುದು" ಎಂದು ತಿಳಿಸಿದ್ದಾರೆ.
ದೇಶದಲ್ಲೀಗ ಕೊರೊನಾ ಸೋಂಕಿನ ಅಬ್ಬರ ಕಡಿಮೆ ಯಾ ಗಿದ್ದರೂ, ಸದ್ಯಕ್ಕೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ ಆರ್ಸಿ) ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಜನಗಣತಿ ಹಾಗೂ ಎನ್ಆರ್ಸಿ ಕುರಿತು ದೇಶವಾಸಿಗಳಲ್ಲಿ ಮೂಡಿದ್ದ ಆತಂಕ ವನ್ನು ದೂರ ಮಾಡಲು ಸರ್ಕಾರ ಯತ್ನಿಸಿದೆ.