ಮುಂಬೈ, ಫೆ.03(DaijiworldNews/HR): ಗಣರಾಜ್ಯೋತ್ಸವದಂದು ನಡೆದ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ರಾಷ್ಟ್ರ ಧ್ವಜಕ್ಕೆ ಅವಮಾನವಾಗುವಂತಹ ಘಟನೆ ನಡೆದಿಲ್ಲ, ಕೆಂಪುಕೋಟೆಯಲ್ಲಿ ಅಂದು ನಡೆದ ಘಟನೆಗಳ ಸೆರೆಹಿಡಿದಿರುವ ವಿಡಿಯೊದಲ್ಲಿ ಇಂತಹ ಯಾವುದೇ ದೃಶ್ಯ ಇಲ್ಲ ಎಂದು ಶಿವಸೇನಾ ಹೇಳಿದೆ.
ಈ ಕುರಿತು ಶಿವಸೇನಾ ಪಕ್ಷದ ಮುಖವಾಣಿಯಾಗಿರುವ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದ್ದು, "ನಡೆಯದ ಘಟನೆಯನ್ನು ವರ್ಣಿಸುವುದು ಮತ್ತು ಆ ವಿಷಯದ ಕುರಿತಾಗಿ ಹುಯಿಲೆಬ್ಬಿಸುವುದು ಕೂಡ ಒಂದು ರೀತಿಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಹಾಗೆ" ಎಂದು ಹೇಳಿದೆ.
ಇನ್ನು "ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನವಾಗುವಂತಹ ಯಾವುದೇ ದೃಶ್ಯಾವಳಿ ಕಂಡುಬರುತ್ತಿಲ್ಲ, ಈಗಲೂ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜ ಹೆಮ್ಮೆಯಿಂದ ಹಾರುತ್ತಿದೆ" ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.