ಚಿತ್ರದುರ್ಗ, ಫೆ.03 (DaijiworldNews/PY): ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕರೆದ ಔತಣಕೂಟಕ್ಕೆ ಟಾಂಗ್ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್, "ಊಟ ಹಾಗೂ ತಿಂಡಿಗೆ ನಮ್ಮ ಬೇಡಿಕೆಗಳು ಈಡೇರುವುದಿಲ್ಲ" ಎಂದರು.
ಯತ್ನಾಳ್ ಅವರು ಮಂಗಳವಾರ ರಾತ್ರಿ ಸಿಎಂ ಅವರ ಕರೆದಿದ್ದ ಔತಣಕೂಟಕ್ಕೆ ಗೈರಾಗಿದ್ದು, ಚಿತ್ರದುರ್ಗದಲ್ಲಿ ನಡೆದ ಪಂಚಮಸಾಲಿ ಪಾದಾಯತ್ರೆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಸಮಾವೇಶದ ನಂತರ ಮಾತನಾಡಿದ ಅವರು, "ರಾಜ್ಯದಲ್ಲಿ ನಾವೇ ಮಂತ್ರಿಗಿರಿ ನೀಡುವ ಯೋಗ ಬರಲಿದೆ. ದಹಲಿ ಹೈಕಮಾಂಡ್ಗೆ ನಾನು ಏನು ಎನ್ನುವುದು ತಿಳಿದಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರಕಲಿದೆ. ಶ್ರೀಗಳು ಬಿಸಿಲಿನಲ್ಲಿ ಪಾದಯಾತ್ರೆ ಮಾಡುತ್ತಿದ್ದರೂ ಕೂಡಾ ಸಿಎಂ ಅವರು ಮಾತನಾಡಲಿಲ್ಲ. ಈ ವಿಚಾರದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ನಂತರ ಸಭೆ ಕರೆದಿದ್ದಾರೆ" ಎಂದರು.
"2ಎ ಮೀಸಲಾತಿಗಾಗಿ ನಾವು ಸದನಸ ಬಾವಿಗೆ ಇಳಿದು ಪ್ರತಿಭಟನೆ ಮಾಡಿದೆವು. ಸಿಎಂ ಅವರು ಔತಣಕೂಟ ಏರ್ಪಡಿಸಿದರೆ ನಮ್ಮ ಬೇಡಿಕೆಗಳು ಈಡೇರುವುದಿಲ್ಲ. ಶಾಸಕ, ಸಂಸದ ಹೇಗೆ ಆಗಬೇಕು ಎನ್ನವುದು ನಮಗೆ ತಿಳಿದಿದೆ. ನಮ್ಮನ್ನು ಹೊರಗೆ ಹಾಕಿದರೂ ನಾವು ಆಗುತ್ತೇವೆ, ಪಕ್ಷದ ಒಳಗಿದ್ದರೂ ನಾವು ಗೆಲ್ಲುತ್ತೇವೆ" ಎಂದು ಹೇಳಿದರು.
"ದೇಶದಲ್ಲಿ ಹುಟ್ಟಿರುವ ಎಲ್ಲರಿಗೂ ಸಿಎಂ, ಪಿಎಂ ಆಗುವ ಅರ್ಹತೆ ಇದೆ. ಹಾಗಾದರೆ ನಮಗೂ ಆ ಅದೃಷ್ಟ ಏಕೆ ಇರಬಾರದು?. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಯುಗಾದಿಯೊಳಗೆ ಉತ್ತರ ಕರ್ನಾಟಕದವರಿ ಸಿಎಂ ಆಗುತ್ತಾರೆ. ಆದರೆ, ಸಿಎಂ ಬಿಎಸ್ವೈ ಅವರ ಸಂಪುಟದಲ್ಲಿ ನಾನು ಮಂತ್ರಿಯಾಗಲದಲ. ಕೆಲವು ಮಂದಿ ಮಾಠಾಧೀಶರಿಂದ ಲಾಬಿ ಮಾಡಿಸಿ, ದಕ್ಷಿಣೆ ಕೊಟ್ಟು ಮಂತ್ರಿಯಾಗಿದ್ದಾರೆ. ಆದರೆ, ಅಂತಹ ರಾಜಕಾರಣಿ ನಾನಲ್ಲ" ಎಂದು ತಿಳಿಸಿದರು.
"ಯುಗಾದಿಯ ನಂತರ ಎರಡನೇ ಹಂತದ ಯುಗ ಹಾಗೂ ನಾಯಕತ್ವ ಆರಂಭವಾಗಲಿದೆ. ಈ ರಾಜ್ಯಕ್ಕೆ ಪ್ರಾಮಾಣಿಕ, ಹಿಂದುತ್ವದ ಪರ ಇರುವ ರಾಜಕಾರಣಿಯ ಅಗತ್ಯವಿದೆ" ಎಂದರು.