ನವದೆಹಲಿ, ಫೆ.03(DaijiworldNews/HR): ದೆಹಲಿಯ ಧಾರವಾಹಿ ನಟಿಯೊಬ್ಬರು ತನ್ನ ಕುಟುಂಬದವರೊಂದಿಗೆ ರೆಸ್ಟೊರೆಂಟ್ ನಲ್ಲಿ ಭೋಜನ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ನಾಲ್ಕು ಕುಡುಕರಿಂದ ಕಿರುಕುಳ ನೀಡಿದ್ದಾರೆ ಎಂದು ನಟಿಆರೋಪಿಸಿದ್ದಾರೆ.
ಕಾರನ್ನು ನಾಲ್ಕು ಜನ ಕುಡುಕರು ಬೆನ್ನಟ್ಟಿದ್ದು ಬಳಿಕ ತನ್ನ ಗಂಡನ ಮುಂದೆ ಕಿರುಕುಳ ನೀಡಲಾಯಿತು ಮತ್ತು ಅಮಾನುಷವಾಗಿ ನಿಂದಿಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಟಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆಶಿಶ್ ಕಪೂರ್, ಚಿರಾಗ್, ಕಾಶಿಶ್ ಮದನ್ ಮತ್ತು ಅವರ ಸಹೋದರ ಎಂದು ಗುರುತಿಸಲಾಗಿದೆ
ನಟಿಯ ದೂರಿನ ಆಧಾರದ ಮೇಲೆ ಪೊಲೀಸರು ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ದಾರಿಯಲ್ಲಿ ವ್ಯಾಗನರ್ ಕಾರಿನಲ್ಲಿದ್ದ ನಾಲ್ಕು ಹುಡುಗರು ತಮ್ಮ ಕಾರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದರು. ನಾಲ್ವರು ಹುಡುಗರು ಅವರನ್ನು ಹಿಂಬಾಲಿಸಿದರು ಮತ್ತು ಕಾರಿನಿಂದ ಇಳಿದ ಕೂಡಲೇ ನಟಿಯನ್ನು ಕಿರುಕುಳ ನೀಡಲು ಮುಂದಾಗಿದ್ದರು ಎಂಬುವುದನ್ನು ಪೊಲೀಸ್ ಮೂಲಗಳು ತಿಳಿಸಿವೆ.