ಮೂಡುಬಿದಿರೆ, ಫೆ. 02 (DaijiworldNews/SM): ಇಲ್ಲಿನ ಪುರಸಭೆ ವ್ಯಾಪ್ತಿಯ ಗಂಟಲ್ಕಾಟ್ಟೆ ಮನೆಯೊಂದರಲ್ಲಿ ನಡೆದ ಕೊರಗಜ್ಜ ದೈವಾರಾಧನೆ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯೊಬ್ಬರಿಗೆ ಅವೇಶ ಬಂದಿರುವ ಘಟನೆ ನಡೆದಿದೆ.
ಗಂಟಲ್ಕಾಟ್ಟೆ ಮನೆಯೊಂದರ ಕೊರಗಜ್ಜನ ಗುಡಿಯಲ್ಲಿ ನೇಮ ನಡೆದಿದ್ದು, ಈ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಗೆ ಅವೇಶ ಬಂದಿದೆ ಎನ್ನಲಾಗಿದೆ. ಅವೇಶದ ಸಂದರ್ಭದಲ್ಲಿ ಮಹಿಳೆ ತುಳುವಿನಲ್ಲಿ ಮಾತನಾಡಿದ್ದಾರೆ. ಒಬ್ಬ ತಮ್ಮ ವಿದೇಶದಲ್ಲಿರುವ ಬಗ್ಗೆ ಪ್ರಸ್ತಾಪಿಸುವ ಮಾತುಗಳು ಅವೇಶ ಬಂದ ಮಹಿಳೆ ಉಲ್ಲೇಖಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಪ್ರಸ್ತುತ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.