ಲಖನೌ, ಫೆ.01 (DaijiworldNews/HR): "ಭಾರತದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಕೇಂದ್ರ ಬಜೆಟ್ ಒಂದು ಮೈಲಿಗಲ್ಲು ಎಂಬುದು ಸಾಬೀತಾಗಲಿದ್ದು, ಈ ಬಜೆಟ್ ಸಾರ್ವಜನಿಕ ಕಲ್ಯಾಣ ಮತ್ತು ಆತ್ಮನಿರ್ಭರ ಭಾರತದ ಆಶಯಗಳಿಗೆ ತಕ್ಕಂತಿದ್ದು, ರೈತರು, ಮಧ್ಯಮ ವರ್ಗ, ಬಡವರು ಮತ್ತು ಮಹಿಳೆಯರು ಸೇರಿದಂತೆ ಎಲ್ಲಾ ವರ್ಗಗಳ ಜನರ ಏಳಿಗೆಯನ್ನು ಮನದಲ್ಲಿಡಲಾಗಿದೆ" ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, "ಕೇಂದ್ರ ಬಜೆಟ್ನಲ್ಲಿ ಎಲ್ಲಾ ವರ್ಗಗಳ ಅಭಿವೃದ್ಧಿಯನ್ನು ಗಮನದಲ್ಲಿಡಲಾಗಿದ್ದು, ಸಾರ್ವಜನಿಕ ಕಲ್ಯಾಣ ಮತ್ತು ಆತ್ಮನಿರ್ಭರ ಭಾರತದ ಆಶಯಗಳಿಗೆ ತಕ್ಕಂತಿದ್ದು, ಭಾರತದ ಆರ್ಥಿಕತೆಯನ್ನು ಹಾದಿಗೆ ತರಲಿದೆ ಮತ್ತು ದೇಶದ ಪ್ರತಿಯೊಂದು ಪ್ರಜೆಯನ್ನು ಆರ್ಥಿಕವಾಗಿ ಸಬಲಗೊಳಿಸಲಿದೆ" ಎಂದರು.
ಇನ್ನು "ಜಾಗತಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅಭಿವೃದ್ಧಿ ಕೇಂದ್ರಿತ ಐತಿಹಾಸಿಕ ಬಜೆಟ್ ಅನ್ನು ಪ್ರಸ್ತುತ ಪಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಅಭಿನಂದನೆಗಳು ಹಾಗೂ ಈ ಬಜೆಟ್ ದೇಶದ ಎಲ್ಲಾ ಜನರ ಆರ್ಥಿಕ ನಿರೀಕ್ಷೆಯನ್ನು ಪೂರೈಸಲಿದೆ" ಎಂದು ಹೇಳಿದ್ದಾರೆ.