ನವದೆಹಲಿ, ಫೆ.01 (DaijiworldNews/HR): ಭೂ ಸೇನಾ ವಿಭಾಗದ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಚಂಡಿ ಪ್ರಸಾದ್ ಮೊಹಾಂತಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಎಸ್.ಕೆ.ಸೈನಿ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿದ್ದು ಅವರು ಭಾನುವಾರ ನಿವೃತ್ತರಾದ ಬಳಿಕ ತೆರವಾದ ಸ್ಥಾನಕ್ಕೆ ಚಂಡಿ ಪ್ರಸಾದ್ ಮೊಹಾಂತಿ ಅವರನ್ನು ನೇಮಿಸಲಾಗಿದೆ.
ಇನ್ನು ಮೊಹಂತಿ ಅವರು ತಮ್ಮ ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಕಠಿಣ ಪರಿಸರದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಚಂಡಿ ಪ್ರಸಾದ್ ಮೊಹಾಂತಿ ಅವರು, ಜೂನ್ 12, 1982 ರಂದು ರಜಪೂತ ರೆಜಿಮೆಂಟ್ಗೆ ನಿಯೋಜನೆಗೊಂಡಿದ್ದರು.