ಬೆಂಗಳೂರು, ಫೆ.01 (DaijiworldNews/MB) : ''ಕೊರೊನಾ ಸಂಕಷ್ಟದ ಮಧ್ಯದಲ್ಲಿ ಆರ್ಥಿಕತೆಯನ್ನೂ ಈ ಬಜೆಟ್ ಬಲಪಡಿಸಲಿದೆ'' ಎಂದು ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕೇಂದ್ರ ಬಜೆಟ್ಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಅವರು, ''ಕೋವಿಡ್ ಸಂಕಷ್ಟದ ಕಾಲದಲ್ಲಿ ಪ್ರಜೆಗಳಿಗೆ ಅನುಕೂಲವಾಗುವಂತೆ ಯಾವುದೇ ಹೊಸ ತೆರಿಗೆಯನ್ನು ಹಾಕದೇ, ತೆರಿಗೆರಹಿತವಾದ ಬಜೆಟ್ ಘೋಷಿಸಿದ ಮಾನ್ಯ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು'' ಎಂದು ತಿಳಿಸಿದ್ದಾರೆ.
''ಸಣ್ಣ ಉದ್ದಿಮೆದಾರರಿಗೆ ಮತ್ತು ಹೊಸ ಉದ್ಯಮವನ್ನು ಪ್ರಾರಂಭಿಸುವವರಿಗೆ ಈ ಬಜೆಟ್ ವರದಾನವಾಗಲಿದೆ. ಕನಿಷ್ಟ ತೆರಿಗೆ ಕಟ್ಟುತ್ತಿರುವವರಿಗೂ ಸಹ ಪ್ರಸ್ತುತ ತೆರಿಗೆಯ ಮೊತ್ತವನ್ನು ಕಡಿಮೆ ಮಾಡಿ, ಕೋವಿಡ್ ಸಂಕಷ್ಟದ ಮಧ್ಯದಲ್ಲಿ ಆರ್ಥಿಕತೆಯನ್ನೂ ಈ ಬಜೆಟ್ ಬಲಪಡಿಸಲಿದೆ'' ಎಂದು ಅಭಿಪ್ರಾಯಿಸಿದ್ದಾರೆ.