ಬೆಂಗಳೂರು,ಫೆ.01 (DaijiworldNews/HR): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ಮೂರು ಬಾರಿ ಆತ್ಮನಿರ್ಭರ ಬಜೆಟ್ ಘೋಷಿಸಿದ್ದು, ಈಗ "ಆತ್ಮ ಬರ್ಬಾದ್" ಬಜೆಟ್ ಘೋಷಿಸಿದ್ದಾರೆ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದು ಯಾವ ರೀತಿಯ ಅರ್ಥ ವ್ಯವಸ್ತೆ ಎಂದು ಗೊತ್ತಿಲ್ಲ. ಇದರ ಬದಲಾಗಿ ರೈತರ ಸಾಲ ಮನ್ನಾ ಮಾಡಬಹುದಿತ್ತು" ಎಂದರು.
ಇನ್ನು ಈ ಬಾರಿಯ ಬಜೆಟ್ ಬಗ್ಗೆ ನಾನು ಯಾವುದೇ ರೀತಿಯ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ" ಎಂದು ಹೇಳಿದ್ದಾರೆ.