ನವದೆಹಲಿ, ಫೆ.01 (DaijiworldNews/MB) : 2021-22 ನೇ ಸಾಲಿನ ಕೇಂದ್ರ ಬಜೆಟ್ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಈ ಬೆನ್ನಲ್ಲೇ, ''ದೇಶದ ಆಸ್ತಿಯನ್ನು ತನ್ನ ಬಂಡವಾಳಶಾಹಿ ಗೆಳೆಯರಿಗೆ ಹಸ್ತಾಂತರಿಸಲು ಯೋಜನೆಯನ್ನು ಮೋದಿ ಸರ್ಕಾರ ಹೊಂದಿದೆ'' ಎಂದು ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ''ಬಂಡವಾಳವನ್ನು ಜನರ ಕೈಗೆ ಒಪ್ಪಿಸುವುದನ್ನು ಮರೆತಿರುವ ಮೋದಿ ಸರ್ಕಾರವು ಭಾರತದ ಆಸ್ತಿಯನ್ನು ತನ್ನ ಬಂಡವಾಳಶಾಹಿ ಗೆಳೆಯರಿಗೆ ಹಸ್ತಾಂತರಿಸಲು ಯೋಜಿಸಿದೆ'' ಎಂದು ದೂರಿದ್ದಾರೆ.
ವಿಮಾ ಕಂಪನಿಗಳಲ್ಲಿನ ಎಫ್ಡಿಐ ಮಿತಿಯನ್ನು ಶೇ.49 ರಿಂದ ಶೇ.74 ಕ್ಕೆ ಹೆಚ್ಚಿಸಲು ಮತ್ತು ಸುರಕ್ಷತೆಗಳೊಂದಿಗೆ ವಿದೇಶಿ ಮಾಲೀಕತ್ವ ಮತ್ತು ನಿಯಂತ್ರಣಕ್ಕೆ ಆದ್ಯತೆ ನೀಡುವ ವಿಮಾ ಕಾಯ್ದೆ 1938 ಅನ್ನು ತಿದ್ದುಪಡಿ ಮಾಡಲು ಕೇಂದ್ರ ಮುಂದಾಗಿದೆ.