ನವದೆಹಲಿ, ಫೆ.01 (DaijiworldNews/MB) : 2021-22 ನೇ ಸಾಲಿನ ಕೇಂದ್ರ ಬಜೆಟ್ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಸತತ ಮೂರನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ ಡಿಜಿಟಲ್ ಆಗಿದ್ದು ಸಾಂಪ್ರದಾಯಿಕ ಬಹಿ ಖಾತಾ ಬದಲಿಗೆ ಈ ಬಾರಿ ಟ್ಯಾಬ್ ಮೂಲಕ ಬಜೆಟ್ ಮಂಡಿಸಲಾಗಿದೆ. ಕೊರೊನಾ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ಬಜೆಟ್ ಅನ್ನು ಕಾಗದ ರಹಿತವಾಗಿ ಮಂಡನೆ ಮಾಡಲಾಗಿದೆ. ಬಜೆಟ್ ಪ್ರತಿಯು ಆನ್ಲೈನ್ ಆಪ್ನಲ್ಲಿ ಲಭ್ಯವಿದೆ.
ಕೇಂದ್ರ ಬಜೆಟ್ನ ವಿವರ:
ಕೊರೊನಾ ಲಸಿಕೆಗಾಗಿ ಸರ್ಕಾರ 35 ಸಾವಿರ ಕೋಟಿ ನೀಡಿದೆ. ಅಗತ್ತವಿದ್ದರೆ ಹೆಚ್ಚಿನ ಹಣ ನೀಡಲು ಸರ್ಕಾರ ಬದ್ದ
ರೈಲ್ವೆಗಾಗಿ 1,10,055 ಕೋಟಿ ರೂ.ಗಳನ್ನು ನೀಡುತ್ತಿದ್ದೇನೆ, ಅದರಲ್ಲಿ 1,07,100 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮಾತ್ರ
ಬೆಂಗಳೂರಿನಲ್ಲಿ 58 ಕಿ.ಮೀ. ಹೊಸ ಮೆಟ್ರೋ ರೈಲು ಮಾರ್ಗಕ್ಕಾಗಿ 14,788 ಕೋಟಿ ಘೋಷಣೆ
2021-22 ರಲ್ಲಿ ಎಲ್ಐಸಿಯಲ್ಲಿ ಐಪಿಒ, ಇದಕ್ಕಾಗಿ ಅಗತ್ಯ ತಿದ್ದುಪಡಿ
ವಿಮಾ ಕಂಪನಿಗಳಲ್ಲಿ ಅನುಮತಿಸುವ ಎಫ್ಡಿಐ ಮಿತಿಯನ್ನು 49% ರಿಂದ 74% ಕ್ಕೆ ಹೆಚ್ಚಿಸಲು ವಿಮಾ ಕಾಯ್ದೆ 1938 ಅನ್ನು ತಿದ್ದುಪಡಿ
ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವ ಹೊಸ ನೀತಿ
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಪ್ರಮುಖ ರಾಷ್ಟ್ರೀಯ ಹೈವೇ ಯೋಜನೆ ಘೋಷಣೆ
ಉಜ್ವಲ ಯೋಜನೆಯಡಿ ಮತ್ತೆ 1 ಕೋಟಿ ಕುಟುಂಬಗಳಿಗೆ ಗ್ಯಾಸ್ ಸರಬರಾಜು ಗುರಿ
ಆತ್ಮನಿರ್ಭರ್ ಸ್ವಸ್ತ್ ಭಾರತ್ ಯೋಜನೆಯಡಿ ಆರು ವರ್ಷಗಳಲ್ಲಿ ಸುಮಾರು 64,180 ಕೋಟಿ ವಿನಿಯೋಗ ಪ್ರಾರಂಭ
ಒಂದು ದೇಶ ಒಂದೇ ರೇಷನ್ ಕಾರ್ಡ್ ಘೋಷಣೆ
ಅಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಪೋರ್ಟಲ್
ಡಿಜಿಟಲ್ ಜನಗಣತಿಗೆ 3,768 ಕೋಟಿ ಮೀಸಲು
75 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿ ಹೊಂದಿರುವ ಹಿರಿಯ ನಾಗರಿಕರಿಗೆ ಐಟಿ ರಿಟರ್ನ್ ಸಲ್ಲಿಕೆಯಿಲ್ಲ
5 ಕೋಟಿ ವಹಿವಾಟಿನ ಚಾರಿಟೇಬಲ್ ಟ್ರಸ್ಟ್ಗೆ ತೆರಿಗೆ ವಿನಾಯಿತಿ
ಅಸ್ಸಾಂ, ಬಂಗಾಳದ ಚಹಾ ಕಾರ್ಮಿಕರಿಗೆ 1,500 ಕೋಟಿ
ಕೃಷಿ ಸಾಲ ಗುರಿ 16.5 ಲಕ್ಷ ಕೋಟಿಗೆ ಹೆಚ್ಚಿಸುವ ಪ್ರಸ್ತಾಪ
ರಾಷ್ಟ್ರೀಯ ಶಿಕ್ಷಣ ನೀತಿಯಡಿ 15,000 ಕ್ಕೂ ಅಧಿಕ ಶಾಲೆಗಳ ಬಲವರ್ಧನೆಗೆ ಚಿಂತನೆ
4,378 ನಗರ ಸ್ಥಳೀಯ ಸಂಸ್ಥೆಗಳಿಗೆ 2.87 ಲಕ್ಷ ಕೋಟಿ ವಿನಿಯೋಗದೊಂದಿಗೆ ಜಲ್ ಜೀವನ್ ಮಿಷನ್ ಘೋಷಣೆ
ಸರಕಾರಿ ಬಸ್ಗಳಿಗೆ ಕೇಂದ್ರ ಸರ್ಕಾರದಿಂದ 18 ಸಾವಿರ ಕೋಟಿ ನೆರವು
ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್ ಯೋಜೆನ ಘೋಷಣೆ
17 ಸಾವಿರ ಗ್ರಾಮೀಣ ಆರೋಗ್ಯ ಕೇಂದ್ರ ಸ್ಥಾಪನೆ
ವಿದೇಶಿ ಹೂಡಿಕೆ ಹೆಚ್ಚಳಕ್ಕೆ ನಿಯಮ ಸಡಿಸಲು ನಿರ್ಧಾರ
ಪೆಟ್ರೋಲ್, ಡಿಸೇಲ್ ಮೇಲೆ ಕೃಷಿ ಸೆಸ್
ಪೆಟ್ರೋಲ್, ಡಿಸೇಲ್, ಕಾಬೂಲ್ ಕಡಲೆ, ಸೇಬು, ಚಿನ್ನ-ಬೆಳ್ಳಿ, ವಾಹನ ಬಿಡಭಾಗ, ಹುರಿಗಡಲೆ, ಹತ್ತಿ, ಮೊಬೈಲ್, ಬಿಡಿಭಾಗ ದರ ಹೆಚ್ಚಳ
ಸಂಶೋಧನಾ ವಲಯ 50 ಸಾವಿರ ಕೋಟಿ, ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ
ಉತ್ಪಾದನಾ ವಲಯಕ್ಕೆ 1.94 ಕೋಟಿ ರೂಪಾಯಿ ಅನುದಾನ
2 ಸಾವಿರ ಕೋಟಿಗೂ ಅಧಿಕ ಹೂಡಿಕೆಯ ದೇಶದ ಒಟ್ಟು 7 ಬಂದರುಗಳ ಅಭಿವೃದ್ದಿಗೆ ಯೋಜನೆ