ನವದೆಹಲಿ, ಫೆ.01 (DaijiworldNews/MB) : ಎರಡು ಸಾವಿರ ಕೋಟಿಗೂ ಅಧಿಕ ಹೂಡಿಕೆಯ ದೇಶದ ಒಟ್ಟು ಏಳು ಬಂದರುಗಳ ಅಭಿವೃದ್ದಿಗೆ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಪ್ರಸ್ತುತ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ನವ ಮಂಗಳೂರು, ಮರ್ಮಾ ಗೋವಾ, ದೀನದಯಾಳ್ (ಕಾಂಡ್ಲಾ), ಕಾಮರಾಜ್ನಗರ (ಎನ್ನೊರೆ), ಮುಂಬೈ, ಕೊಚ್ಚಿನ್, ಚಿದಂಬರನಾರ್, ಜೆಎನ್ಪಿಟಿ, ಚೆನ್ನೈ, ವಿಶಾಖಪಟ್ಟಣಂ, ಪಾರದೀಪ್ ಮತ್ತು ಕೋಲ್ಕತ್ತಾ ದಂತಹ 12 ಬೃಹತ್ ಬಂದರುಗಳಿವೆ.
ಈ ಬಂದರು ಅಭಿವೃದ್ಧಿ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.