ನವದೆಹಲಿ,ಫೆ.01 (DaijiworldNews/HR): 2021-22ನೇ ಸಾಲಿನ ಬಜೆಟ್ನಲ್ಲಿ ಹಿರಿಯ ನಾಗರಿಕರಿಗೆ ತೆರಿಯಲ್ಲಿ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆದಾಯ ತೆರಿಗೆ ಸಲ್ಲಿಸುವ ವೇಳೆ ಕೇವಲ ಠೇವಣಿ ಮತ್ತು ಬಡ್ಡಿ ಮೇಲಿನ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು "15 ಲಕ್ಷ ಮೇಲ್ಪಟ್ಟು ತೆರಿಗೆ ವಂಚನೆ ಮಾಡುವವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲು ತೀರ್ಮಾನಿಸಲಾಗಿದ್ದು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಕರಣ ಸ್ಥಾಪನೆಯಾದ ನಂತರ ಇದುವರೆಗೂ 1.1ಲಕ್ಷ ಮಂದಿ ತಮ್ಮ ತೆರಿಗೆ ವಿವಾದಗಳನ್ನು ಬಗೆಹರಿಸಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
ಆರ್ಥಿಕ ಚೇತರಿಕೆಗಾಗಿ ಹಾಗೂ ಬ್ಯಾಂಕ್ ವಹಿವಾಟುಗಳಿಗೆ ಅಗ್ಗದ ಸಾಲ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, 1.5 ಲಕ್ಷ ರೂಪಾಯಿವರೆಗೆ ಸಾಲದ ಮೇಲಿನ ತೆರಿಗೆ ವಿನಾಯ್ತಿಗೆ ನಿರ್ಧರಿಸಿದ್ದು, ಇದು 2022ರ ಮಾರ್ಚ್ 31ರವರೆಗೂ ಪಡೆಯುವ ಸಾಲಕ್ಕೆ ಅನ್ವಯವಾಗಲಿದೆ ಎಂದು ಬಜೆಟ್ ನಲ್ಲಿ ಘೋಷಿಸಿದ್ದಾರೆ.