ಬೆಂಗಳೂರು,ಫೆ.01 (DaijiworldNews/HR): ಸದನ ಸಲಹಾ ಸಮಿತಿ ಸಭೆ ಮುಕ್ತಾಯವಾಗಿದ್ದು, ಈ ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ ಯಾವುದೇ ಹೊಸ ಬಿಲ್ ಮಂಡನೆ ಮಾಡುವುದಿಲ್ಲ ಎಂದು ಸಭೆಯಲ್ಲಿ ಸರ್ಕಾರ ತಿಳಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, "ಇವತ್ತಿನ ಸಭೆಯಲ್ಲಿ ಬಿಲ್ ಬಗ್ಗೆ ಚರ್ಚೆ ನಡೆಸಿದ್ದು, ಸಭೆಯಲ್ಲಿ ಚರ್ಚೆಯಾದ ಬಿಲ್ ಮಾತ್ರವೇ ಮಂಡನೆಯಾಗಬೇಕು ಎಂದು ನಾವು ಹೇಳಿದ್ದು, ಇದಕ್ಕೆ ಸರ್ಕಾರ ಒಪ್ಪಿದೆ" ಎಂದರು.
ಇನ್ನು "ಬೆಳಗಾವಿಯಲ್ಲಿ ಅಧಿವೇಶನ ಕರೆಯಲು ನಾವು ಒತ್ತಾಯಿಸಿದ್ದೇವೆ. ಮುಂದಿನ ಬಜೆಟ್ ಅಧಿವೇಶನ ಅಲ್ಲಿಯೇ ಮಾಡಬೇಕು ಎಂದ್ದಿದ್ದೇವೆ. ಉತ್ತರ ಕರ್ನಾಟಕ ಜನರಿಗೆ ಅನ್ಯಾಯವಾಗುತ್ತಿದ್ದು, ಅವರ ಸಮಸ್ಯೆಗಳು ಚರ್ಚೆಯಾಗಬೇಕು. ಆದರೆ ಸರ್ಕಾರ ಬಜೆಟ್ ನಂತರದ ಅಧಿವೇಶನ ಮಾಡುತ್ತೇವೆ ಎಂದಿದ್ದಾರೆ" ಎಂದು ಹೇಳಿದರು.