ನವದೆಹಲಿ, ಫೆ.01 (DaijiworldNews/HR): ವಾಹನ ಉದ್ಯಮ ಕ್ಷೇತ್ರದ ಬದಲಾವಣೆ ಈ ಬಾರಿಯ ಬಜೆಟ್ನಲ್ಲಿ ಆದ್ಯತೆ ನೀಡಿದ್ದು, ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವ ಹೊಸ ನೀತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
20 ವರ್ಷದಷ್ಟು ಹಳೆಯದಾದ ಖಾಸಗಿ ವಾಹನಗಳು ಮತ್ತು 15 ವರ್ಷಗಳಷ್ಟು ಹಳೆಯದಾದ ವಾಣಿಜ್ಯ ವಾಹನಗಳನ್ನು ಸ್ಕ್ರಾಪ್ಗೆ ಹಾಕುವ ಸಂಬಂಧ ಹೊಸ ಸ್ಕ್ರಾಪೇಜ್ ನೀತಿಯನ್ನು ಪ್ರಕಟಿಸಿದ್ದು, ಇದು ಈ ನೀತಿಯು ಸ್ವಯಂ ಪ್ರೇರಣೆಯದ್ದಾಗಿರಲಿದ್ದು, 20 ವರ್ಷದ ಖಾಸಗಿ ಹಾಗೂ 15 ವರ್ಷದ ವಾಣಿಜ್ಯ ವಾಹನಗಳನ್ನು ಫಿಟ್ನೆಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ಪ್ರಮುಖ ರಾಷ್ಟ್ರೀಯ ಹೈವೇ ಯೋಜನೆಗಳನ್ನು ಘೋಷಿಸಲಾಗಿದ್ದು, ಕೇರಳಕ್ಕೆ 65,000 ಕೋಟಿ ರೂ ವೆಚ್ಚದಲ್ಲಿ 1,100 ಕಿಮೀ, ತಮಿಳುನಾಡಿನಲ್ಲಿ 3,500 ಕಿಮೀ, ಅಸ್ಸಾಂನದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 1,300 ಕಿಮೀ ಮತ್ತು ಪಶ್ಚಿಮ ಬಂಗಾಳದಲ್ಲಿ 95,000 ಕೋಟಿ ವೆಚ್ಚದಲ್ಲಿ 675 ಕಿಮೀ ಹೆದ್ದಾರಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.