ನವದೆಹಲಿ, ಫೆ.01 (DaijiworldNews/MB) : ''2021-22 ರಲ್ಲಿ ಎಲ್ಐಸಿಯಲ್ಲಿ ಐಪಿಒ ಅನ್ನು ಸಹ ತರಲಾಗುತ್ತದೆ. ಇದಕ್ಕಾಗಿ ಅಗತ್ಯ ತಿದ್ದುಪಡಿ ಮಾಡಲಾಗುತ್ತದೆ'' ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
''ಅಲ್ಲದೇ ಅಧಿವೇಶದಲ್ಲಿಯೇ ಈ ಅಗತ್ಯ ತಿದ್ದುಪಡಿ ತರಲಾಗುವುದು'' ಎಂದು ಹೇಳಿದ್ದಾರೆ.
''ವಿಮಾ ಕಂಪನಿಗಳಲ್ಲಿ ಅನುಮತಿಸುವ ಎಫ್ಡಿಐ ಮಿತಿಯನ್ನು 49% ರಿಂದ 74% ಕ್ಕೆ ಹೆಚ್ಚಿಸಲು ಮತ್ತು ಸುರಕ್ಷತೆಗಳೊಂದಿಗೆ ವಿದೇಶಿ ಮಾಲೀಕತ್ವ ಮತ್ತು ನಿಯಂತ್ರಣವನ್ನು ಅನುಮತಿಸಲು ವಿಮಾ ಕಾಯ್ದೆ 1938 ಅನ್ನು ತಿದ್ದುಪಡಿ ಮಾಡಲು ನಾನು ಸಲಹೆ ನೀಡುತ್ತೇನೆ'' ಎಂದು ಕೂಡಾ ಇದೇ ವೇಳೆ ಹೇಳಿದ್ದಾರೆ.