ನವದೆಹಲಿ, ಫೆ.01 (DaijiworldNews/MB) : ಬೆಂಗಳೂರಿನಲ್ಲಿ 58 ಕಿ.ಮೀ. ಹೊಸ ಮೆಟ್ರೋ ರೈಲು ಮಾರ್ಗಕ್ಕಾಗಿ ಕೇಂದ್ರ ಬಜೆಟ್ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 14,788 ಕೋಟಿ ಘೋಷಿಸಿದ್ದಾರೆ.
ಒಟ್ಟು 27 ರಾಜ್ಯಗಳಲ್ಲಿ 1,016 ಕಿ.ಮೀ ಮೆಟ್ರೋ ಮಾರ್ಗದ ಗುರಿ ಇದೆ ಎಂದು ವರದಿಯಾಗಿದೆ.
ಇನ್ನು ಇದೇ ವೇಳೆ, ''ಕೊರೊನಾ ಲಸಿಕೆಗಾಗಿ ಸರ್ಕಾರ 35 ಸಾವಿರ ಕೋಟಿ ನೀಡಿದೆ. ಅಗತ್ತವಿದ್ದರೆ ಹೆಚ್ಚಿನ ಹಣ ನೀಡಲು ಸರ್ಕಾರ ಬದ್ದ'' ಎಂದು ಹೇಳಿದ್ದಾರೆ.
''ನಾನು ರೈಲ್ವೆಗಾಗಿ 1,10,055 ಕೋಟಿ ರೂ.ಗಳನ್ನು ನೀಡುತ್ತಿದ್ದೇನೆ, ಅದರಲ್ಲಿ 1,07,100 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮಾತ್ರ'' ಎಂದು ಕೂಡಾ ತಿಳಿಸಿದ್ದಾರೆ.