ಮಂಗಳೂರು,ಫೆ.01 (DaijiworldNews/HR): ಸ್ನೇಹಿತರೊಂದಿಗೆ ಯುವತಿ ರೆಸ್ಟೋರೆಂಟ್ವೊಂದರಲ್ಲಿ ಕುಳಿತಿದ್ದಾಗ ಆಕೆಯ ಹಳೆ ಸ್ನೇಹಿತ ಮತ್ತು ಆತನ ಗೆಳೆಯರು ಏಕಾಏಕಿ ದಾಳಿ ನಡೆಸಿದ ಘಟನೆ ನಗರದ ಕದ್ರಿಯಲ್ಲಿ ನಡೆದಿದೆ.
ಈ ಘಟನೆ ಜ.30ರಂದು ಮಧ್ಯಾಹ್ನ ಕದ್ರಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದ್ದು, ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿದೆ.
ಇನ್ನು ಯುವತಿಯು ತನ್ನ ಮೂವರು ಗೆಳೆಯರೊಂದಿಗೆ ಕುಳಿತಿದ್ದಾಗ ಏಕಾಏಕಿ ನುಗ್ಗಿದ ನಾಲ್ವರು ಯುವಕರು ದಾಳಿ ನಡೆಸಿದ್ದು, ಹೋಟೆಲ್ನಲ್ಲಿ ಸಿಕ್ಕ ವಸ್ತುಗಳಿಂದ ಹೊಡೆದಾಟ ನಡೆಸಿದ್ದು, ಈ ವೇಳೆ ಓರ್ವ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ. ಯುವತಿಯೊಂದಿಗೆ ಇದ್ದ ಯುವಕ ಚೂರಿ ಇರಿತದಿಂದ ಗಾಯಗೊಂಡಿದ್ದಾನೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.