ನವದೆಹಲಿ, ಫೆ.01 (DaijiworldNews/MB) : 2021-22 ನೇ ಸಾಲಿನ ಕೇಂದ್ರ ಬಜೆಟ್ ಡಿಜಿಟಲ್ ಆಗಿದ್ದು ಕೇಂದ್ರ ವಿತ್ತ ಸಚಿವೆ ಬಜೆಟ್ ಟ್ಯಾಬ್ ಪ್ರದರ್ಶಿಸಿದ್ದಾರೆ.
ಸಾಂಪ್ರದಾಯಿಕ ಬಹಿ ಖಾತಾ ಬದಲಿಗೆ ಈ ಬಾರಿ ಟ್ಯಾಬ್ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಸಚಿವೆ ನಿರ್ಮಲಾ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.
ಕೊರೊನಾ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ಬಜೆಟ್ ಅನ್ನು ಕಾಗದ ರಹಿತವಾಗಿ ಮಂಡನೆ ಮಾಡಲಾಗುತ್ತಿದೆ. ಬಜೆಟ್ ಪ್ರತಿಯು ಆನ್ಲೈನ್ ಆಪ್ನಲ್ಲಿ ಲಭ್ಯವಾಗಲಿದೆ.
ಕೊರೊನಾ ಸಾಂಕ್ರಾಮಿಕ ಭಾರತಕ್ಕೆ ಅಪ್ಪಳಿಸಿದ ಬಳಿಕ ಇಂದು ಕೇಂದ್ರದ ಮೊದಲ ಬಜೆಟ್ ಮಂಡನೆಯಾಗಲಿದ್ದು ಕೊರೊನಾ ಹೊಡೆತಕ್ಕೂ ಮೊದಲೇ ಬಿಕ್ಕಟ್ಟಿಗೆ ಸಿಲುಕಿರುವ ದೇಶದ ಆರ್ಥಿಕತೆಗೆ ಈ ಬಜೆಟ್ ಲಸಿಕೆಯಾಗಲಿದೆಯೇ ಎಂದು ಕಾದುನೋಡಬೇಕಿದೆ. ಹಾಗೆಯೇ ಈ ಬಜೆಟ್ ಮೇಲೆ ಜನರ ನಿರೀಕ್ಷೆಯೂ ಕೂಡಾ ಎಂದಿಗಿಂತ ಅಧಿಕವಾಗಿದೆ.