ಹುಬ್ಬಳ್ಳಿ, ಫೆ.01 (DaijiworldNews/MB) : ''ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಸ್ಸಾದುದ್ದೀನ್ ಓವೈಸಿಯ ಆಟ ರಾಜ್ಯದಲ್ಲಿ ನಡೆಯುವುದಿಲ್ಲ. ಅವರದ್ದು ಬಿಜೆಪಿಯ ಬಿ ಟೀಮ್'' ಎಂದು ಶಾಸಕ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ರವಿವಾರ ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ''ಎಐಎಂಐಎಂ ಪಕ್ಷದ ಅಸ್ಸಾದುದ್ದೀನ್ ಓವೈಸಿಯ ಆಟ ನಮ್ಮ ಕರ್ನಾಟಕದಲ್ಲಿ ನಡೆಯಲ್ಲ'' ಎಂದು ಹೇಳಿದರು.
ಹಾಗೆಯೇ, ''ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಬಹುಮತ ಪಡೆದು ಅಧಿಕಾರ ಪಡೆಯಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ'' ಎಂದರು.
ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ನಾಯಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಜಮೀರ್ ಅವರನ್ನು ಸನ್ಮಾನಿಸಿದರು.