ನವದೆಹಲಿ, ಜ.31 (DaijiworldNews/HR): ಕೇಂದ್ರ ಸರ್ಕಾರ ದೇಶದಲ್ಲಿನ ಚಿತ್ರಮಂದಿರಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದು, ಇದರ ಅನ್ವಯ ಫೆಬ್ರವರಿ 1ರಿಂದ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರು ಸಿನಿಮಾ ನೊಡಲು ಅವಕಾಶ ಕಲ್ಪಿಸಿದೆ.
ಈ ಕುರಿತು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದ್ದು, "ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಿನಿಮಾ ಪ್ರದರ್ಶನ ಮಾಡುವಂತೆ ತಿಳಿಸಿದೆ. ಕಂಟೈನ್ ಮೆಂಟ್ ವಲಯಗಳಲ್ಲಿ ಮಾತ್ರ ಹಿಂದೆ ಇದ್ದ ನಿಯಮಗಳೇ ಮುಂದುವರೆಯಲಿದೆ" ಎಂದು ತಿಳಿಸಿದೆ.
ಇನ್ನು "ಮಾಸ್ಕ್, ತಾಪಮಾನ ಪರೀಕ್ಷೆ, ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವುದು ಚಿತ್ರಮಂದಿರದಲ್ಲಿ ಕಡ್ಡಾಯವಾಗಿದ್ದು, ಇದರ ಜೊತೆಗೆ ಸ್ಯಾನಿಟೈಸರ್ ಬಳಕೆ, ಡಿಜಿಟಲ್ ಪೇಮೆಂಟ್ ವ್ಯವಸ್ಥೆಗಳನ್ನೂ ಕೂಡಾ ಕಡ್ಡಾಯವಾಗಿ ಪಾಲಿಸುವಂತೆ ಮತ್ತು ಆನ್ ಲೈನ್ ಮೂಲಕವೇ ಸೀಟು ಕಾಯ್ದಿರಬೇಕು" ಎಂದು ಹೇಳಿದೆ.