ಬಾಗಲಕೋಟೆ,ಜ.31 (DaijiworldNews/HR): "ಕರ್ನಾಟಕದಲ್ಲಿ ಇರುವುದು ನರೇಂದ್ರ ಮೋದಿ, ಯಡಿಯೂರಪ್ಪ ಎಂಬ ಡಬಲ್ ಎಂಜಿನ್ಗಳ ಸರ್ಕಾರ. ಆದರೂ ಅಭಿವೃದ್ಧಿ ಏಕೆ ಆಗುತ್ತಿಲ್ಲ" ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬರೀ ಎಂಜಿನ್ ಇವೆ. ಬೋಗಿಗಳೇ ಇಲ್ಲ. ಎಂಜಿನ್ ಜೊತೆಗೆ ಬೋಗಿಗಳ ಚೈನ್ಲಿಂಕ್ ತಪ್ಪಿ ಹೋಗಿದೆ" ಬಿಜೆಪಿ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.
ಇನ್ನು "ನನ್ನ ಸರ್ಕಾರ ತೆಗೆದಿದ್ದಕ್ಕೆ ನನಗೇನು ಅಸೂಯೆಯಿಲ್ಲ. ಮೋದಿ ಹೆಸರು ಮುಂದೆ ಮಾಡಿಕೊಂಡು ಹೆಚ್ಚು ದಿನ ಸರ್ಕಾರ ನಡೆಸಲು ಆಗೊಲ್ಲ. ಮಂತ್ರಿಮಂಡಲ ರಚನೆ, ಪುನರ್ರಚನೆ, ಖಾತೆ ಹಂಚಿಕೆ ಮಾಡಿಕೊಂಡು ಸಮಯ ವ್ಯರ್ಥ ಮಾಡಿಕೊಂಡು ಕಾಲ ಕಳೆಯುತ್ತಿದ್ದೀರಿ. 14 ತಿಂಗಳು ಯಾವ ರೀತಿ ಸರ್ಕಾರ ನಡೆದಿದ್ದು, ಅಭಿವೃದ್ಧಿ ಏಕೆ ಕುಂಠಿತವಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ" ಎಂದು ಹೇಳಿದ್ದಾರೆ.