ಬೆಂಗಳೂರು,ಜ.31 (DaijiworldNews/HR): "ವಿಪಕ್ಷದವರು ಏನೇ ಟೀಕೆ – ಟಿಪ್ಪಣಿ ಮಾಡಿದರೂ ನಾವು ಸ್ವಾಗತಿಸುತ್ತೇವೆ, ನಮ್ಮಿಂದ ತಪ್ಪುಗಳಾಗಿದ್ದರೆ ಸರಿಪಡಿಸಿಕೊಳ್ಳುತ್ತೇವೆ, ಆದರೆ ನಮ್ಮಿಂದ ಯಾವುದೇ ತಪ್ಪಾಗಿಲ್ಲ ವಿಪಕ್ಷದವರು ತಪ್ಪು ಗ್ರಹಿಕೆ ಮಾಡಿಕೊಂಡಿದ್ದಾರೆಂದು ಅವರಿಗೆ ತಿಳಿಸುತ್ತೇವೆ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಾಳಿನ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ವಿರೋಧ ಪಕ್ಷದವರಾಗಿ ಸಿದ್ದರಾಮಯ್ಯ ಅವರ ಕೆಲಸ ಮಾಡುತ್ತಾರೆ. ನಾಳೆ ಸದನ ಸಲಹಾ ಸಮಿತಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಚರ್ಚಿಸಲಿ ಅವರ ಟೀಕೆಗಳು ಏನೇ ಇದ್ದರೂ ಸ್ವಾಗತಿಸುತ್ತೇವೆ" ಎಂದರು.
ಇನ್ನು "ಮಹದಾಯಿ ವಿಚಾರದಲ್ಲಿ ರಾಜಿ ಇಲ್ಲ, ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಗೋವಾ ಸಿಎಂ ಅವರ ಸ್ವಾರ್ಥಕ್ಕಾಗಿ ಮಾತನಾಡುತ್ತಾರೆ. ನ್ಯಾಯಾಲಯದಲ್ಲೂ ತೀರ್ಪು ನಮಗೆ ಅನುಕೂಲಕರವಾಗಿಯೇ ಇದೆ" ಎಂದು ಹೇಳಿದ್ದಾರೆ.