ಬೆಂಗಳೂರು, ಜ.31 (DaijiworldNews/HR): ತಮಿಳುನಾಡಿನ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ನಟರಾಜನ್ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ, ಬಳಿಕ ಅನಾರೋಗ್ಯದ ಕಾರಣದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಬಿಡುಗಡೆಯಾಗಿದ್ದಾರೆ.
ಶಶಿಕಲಾ ನಟರಾಜನ್ ಅವನನ್ನು ಬರಮಾಡಿಕೊಳ್ಳಲು ಆಸ್ಪತ್ರೆಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು, ಆಸ್ಪತ್ರೆ ಸುತ್ತಮುತ್ತ ಭಾರಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. 12 ಗಂಟೆ ಸುಮಾರಿಗೆ ಶಶಿಕಲಾ ಆಸ್ಪತ್ರೆಯಿಂದ ಸೂಕ್ತ ಭದ್ರತೆಯೊಂದಿಗೆ ಬಿಡುಗಡೆಯಾಗಿದ್ದಾರೆ.
ಇನ್ನು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜಯಲಲಿತಾ, ಶಶಿಕಲಾ, ಇಳವರಸಿ ಹಾಗೂ ಸುಧಾಕರ್ ಶಿಕ್ಷೆಗೆ ಗುರಿಯಾಗಿದ್ದು, ಶಶಿಕಲಾ 10 ಕೋಟಿ ರೂ. ದಂಡವನ್ನು ನ್ಯಾಯಾಲಯಕ್ಕೆ ಪಾವತಿಸಿದ್ದರು.